ಇಯರ್‌ಫೋನ್‌ ಹಾಕ್ಕೊಂಡವರ ಮೇಲೆ ರೈಲು ಹರಿದು 6 ಯುವಕರ ದಾರುಣ ಸಾವು

news | Wednesday, February 28th, 2018
Suvarna Web Desk
Highlights

ಪೇಂಟಿಂಗ್‌ ಕೆಲಸದ ಗುತ್ತಿಗೆ ಪಡೆಯಲು ಹೈದರಾಬಾದ್‌ಗೆ ತೆರಳಬೇಕಿದ್ದ 6 ಹದಿಹರೆಯದವರು ರೈಲು ಗಾಡಿಗೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಹಪೂರ್‌ ಜಿಲ್ಲೆಯಲ್ಲಿ ನಡೆದಿದೆ.

ಲಖನೌ: ಪೇಂಟಿಂಗ್‌ ಕೆಲಸದ ಗುತ್ತಿಗೆ ಪಡೆಯಲು ಹೈದರಾಬಾದ್‌ಗೆ ತೆರಳಬೇಕಿದ್ದ 6 ಹದಿಹರೆಯದವರು ರೈಲು ಗಾಡಿಗೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಹಪೂರ್‌ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಓರ್ವ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. 14ರಿಂದ 16 ವರ್ಷದೊಳಗಿನ ಸಂತ್ರಸ್ತರು ಕಿವಿಗೆ ಇಯರ್‌ಫೋನ್‌ ಹಾಕಿಕೊಂಡಿದ್ದೇ, ಅಪಘಾತಕ್ಕೆ ಸಿಲುಕಲು ಕಾರಣ ಎನ್ನಲಾಗಿದೆ. ಪೇಂಟಿಂಗ್‌ ಕೆಲಸಕ್ಕಾಗಿ ಹೈದರಾಬಾದ್‌ಗೆ ತೆರಳಬೇಕಿದ್ದ 7 ಮಂದಿ ಅಪ್ರಾಪ್ತ ಬಾಲಕರು, ತಡವಾಗಿ ಬಂದು ರೈಲು ಗಾಡಿಯನ್ನು ಮಿಸ್‌ ಮಾಡಿಕೊಂಡಿದ್ದರು.

ಈ ವೇಳೆ ವಾಪಸ್‌ ಮನೆಯತ್ತ ತೆರಳಲು ರೈಲಿನ ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಆಗ ಅವರ ಮೇಲೆ ರೈಲುಗಾಡಿ ಹರಿದಿದ್ದು, 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  Sridevi Died in cardiac arrest

  video | Monday, February 26th, 2018

  CM Byte For Kashinath Death

  video | Thursday, January 18th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk