5ಜಿ ತಂತ್ರಜ್ಞಾನ ಹೊಂದಿದ ದೇಶದ ಮೊದಲ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಲಿದೆ. ಏರ್‌ಟೆಲ್ ಕಂಪನಿ ಬೆಂಗಳೂರಿನಲ್ಲಿ 5ಜಿ ತಂತ್ರಜ್ಞಾನ ನೀಡಲು ಸಿದ್ಧತೆ ಆರಂಭಿಸಿದೆ.

ಬೆಂಗಳೂರು(ಸೆ.28): 5ಜಿ ತಂತ್ರಜ್ಞಾನ ಹೊಂದಿದ ದೇಶದ ಮೊದಲ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಲಿದೆ. ಏರ್‌ಟೆಲ್ ಕಂಪನಿ ಬೆಂಗಳೂರಿನಲ್ಲಿ 5ಜಿ ತಂತ್ರಜ್ಞಾನ ನೀಡಲು ಸಿದ್ಧತೆ ಆರಂಭಿಸಿದೆ.

ಬೆಂಗಳೂರಿನ ಜೊತೆಗೆ ಕೋಲ್ಕತಾದಲ್ಲೂ 5ಜಿ ತಂತ್ರಜ್ಞಾನ ಲಭ್ಯವಾಗಲಿದೆ. 5 ಜಿ ತಂತ್ರಜ್ಞಾನದಲ್ಲಿ 1ಜಿಬಿ ವರೆಗೆ 500 ಎಂಬಿಪಿಎಸ್‌'ಗಿಂತ ಹೆಚ್ಚಿನ ವೇಗದಲ್ಲಿ ಇಂಟರ್‌ನೆಟ್ ಲಭ್ಯವಾದರೂ, ಏರ್‌ಟೆಲ್ ಆರಂಭದಲ್ಲಿ 4ಜಿಗಿಂತ ಎರಡು ಮೂರು ಪಟ್ಟು ವೇಗದಲ್ಲಿ ಇಂಟರ್‌ನೆಟ್ ನೀಡುವ ನಿರೀಕ್ಷೆ ಇದೆ.

ಸದ್ಯ 4ಜಿಯಲ್ಲಿ 16 ಎಂಬಿಪಿಎಸ್ ವೇಗದಲ್ಲಿ ಇಂಟರ್‌ನೆಟ್ ಲಭ್ಯವಾಗುತ್ತಿದೆ. ಏರ್‌ಟೆಲ್‌ನ 5ಜಿ ತಂತ್ರಜ್ಞಾನದಲ್ಲಿ 40ರಿಂದ 45 ಎಂಬಿಪಿಎಸ್ ವೇಗ ಲಭ್ಯವಾಗಲಿದೆ. ಬೃಹತ್ ಮಲ್ಟಿಪಲ್ ಇನ್‌'ಪುಟ್ ಮತ್ತು ಮಲ್ಟಿಪಲ್ ಔಟ್‌ಪುಟ್ (ಮ್ಯಾಸಿವ್ ಎಮ್‌ಐಎಂಒ) ತಂತ್ರಜ್ಞಾನವನ್ನು ಏರ್‌ಟೆಲ್ ಬಳಸಿಕೊಳ್ಳಲಿದೆ.