ವಿಧಾನಸಭಾ ಚುನಾವಣೆ : ಶೇ.59ರಷ್ಟು ಅಭ್ಯರ್ಥಿಗಳು ಕೋಟ್ಯಧೀಶರು

First Published 22, Feb 2018, 2:56 PM IST
59 percent candidates are crorepatis
Highlights

ಇನ್ನೇನು ಕೆಲ ದಿನಗಳಲ್ಲೇ ದೇಶದ ಕೆಲ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇದೇ 27ರಂದು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಿದವರಲ್ಲಿ  ಶೇ.59ರಷ್ಟು ಅಭ್ಯರ್ಥಿಗಳು ಕೋಟ್ಯಧೀಶರಾಗಿದ್ದಾರೆ.

ನಾಗಾಲ್ಯಾಂಡ್ : ಇನ್ನೇನು ಕೆಲ ದಿನಗಳಲ್ಲೇ ದೇಶದ ಕೆಲ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇದೇ 27ರಂದು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಿದವರಲ್ಲಿ  ಶೇ.59ರಷ್ಟು ಅಭ್ಯರ್ಥಿಗಳು ಕೋಟ್ಯಧೀಶರಾಗಿದ್ದಾರೆ.

ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಜೆಡಿಯು ಪಕ್ಷದ ಅಭ್ಯರ್ಥಿ ರಾಮೋಂಗೋ ಲೋಥಾ ಅತ್ಯಂತ ಶ್ರೀಮಂತರಾಗಿದ್ದು, ಅವರ ಆಸ್ತಿ ಮೊತ್ತ 38 ಕೋಟಿಯಾಗಿದೆ. 196 ಅಭ್ಯರ್ಥಿಗಳಲ್ಲಿ  ಒಟ್ಟು 114 ಮಂದಿ ಕೋಟ್ಯಧೀಶರಾಗಿದ್ದಾರೆ ಎಂದು ಘೋಷಿಸಲಾಗಿದೆ.

ಲೋಥಾ ಅವರು ಮಾಜಿ ಐಎಎಸ್ ಅಧಿಕಾರಿಯಾಗಿದ್ದು, ಎಲ್ಲಾ ಅಭ್ಯರ್ಥಿಗಳಿಗಿಂತ ಶ್ರೀಮಂತರೆನಿಸಿಕೊಂಡಿದ್ದಾರೆ.

loader