ರಿಯೋ ಡಿ ಜನೈರೋ[ಜ.28]: ಬ್ರೆಜಿಲ್‌ನ ಗಣಿ ಪ್ರದೇಶವೊಂದರ ಬಳಿ ತ್ಯಾಜ್ಯ ಸಂಗ್ರಹಿಸಿದ್ದ ಅಣೆಕಟ್ಟೊಂದು ಒಡೆದುಹೋದ ಪರಿಣಾಮ 58 ಜನ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 300ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ಅವರೆಲ್ಲಾ ಸಾವನ್ನಪ್ಪಿರುವ ಭೀತಿ ಎದುರಾಗಿದೆ.

ಈ ನಡುವೆ ಅಣೆಕಟ್ಟಿನಿಂದ ಹೊರಬಂದ ತ್ಯಾಜ್ಯ ಇನ್ನಷ್ಟುಪ್ರದೇಶಗಳನ್ನು ಆವರಿಸಿಕೊಳ್ಳುವ ಭೀತಿಯ ಹಿನ್ನೆಲೆಯಲ್ಲಿ 25000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತೆರವುಗೊಳಿಸಲಾಗುತ್ತಿದೆ. ಬ್ರುಮೇಡಿನ್ಹೋ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. 282 ಅಡಿ ಎತ್ತರದ ಈ ತ್ಯಾಜ್ಯ ಸಂಗ್ರಹ ಅಣೆಕಟ್ಟನ್ನು 42 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಇತ್ತೀಚೆಗಷ್ಟೇ ಈ ಅಣೆಕಟ್ಟಿನ ಸುರಕ್ಷತಾ ಪರೀಕ್ಷೆ ನಡೆಸಲಾಗಿತ್ತು ಎಂದು ಗಣಿಗಾರಿಕೆ ನಡೆಸುತ್ತಿರುವ ವೇಲ್‌ ಕಂಪನಿ ಹೇಳಿದೆ.