ಈ ಹಳ್ಳಿಯಲ್ಲಿ ಇದೀಗ ಎಲ್ಲರೂ ದಿಢೀರ್ ಶ್ರೀಮಂತರಾಗಿದ್ದಾರೆ. ಅವರು ದಿಢೀರ್ ಕೋಟ್ಯಧೀಶರಾಗಲು ಕಾರಣ ಏನು ಗೊತ್ತಾ..? 

ಬೆಂಗಳೂರು :ದೇಶದ ಅತ್ಯಂತ ಹಿಂದುಳಿದ ಈಶಾನ್ಯ ಭಾಗದ ಅರುಣಾಚಲ ಪ್ರದೇಶದ ಒಂದು ಹಳ್ಳಿಯ ಎಲ್ಲಾ ಕುಟುಂಬಗಳಿಗೆ ಭಾರತೀಯ ಸೇನೆಯಿಂದ ಕೋಟಿ ಕೋಟಿ ಹಣ ನೀಡಲಾಗಿದೆ. ಇದರಿಂದ ಇದೀಗ ಇಲ್ಲಿನ ಕುಟುಂಬಗಳು ದಿಢೀರನೆ ಕೋಟ್ಯಧಿಪತಿಗಳಾಗಿವೆ.

ಇಲ್ಲಿನ ಬೊಂಬಿಲ ಹಳ್ಳಿಗರಿಗೆ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅರುಣಾಚಲ ಮುಖ್ಯಮಂತ್ರಿ ಪೆಮಾ ಖಂಡು ಇಲ್ಲಿನ ಪಶ್ಚಿಮ ಕಮೆಂಗ್ ಜಿಲ್ಲೆಯ ಬೊಂಬಿಲ ಹಳ್ಳಿಗೆ 38 ಕೋಟಿ ಹಣವನ್ನು ನೀಡಿದ್ದಾರೆ. 

ಹೌದು, ಭಾರತೀಯ ಸೇನೆಯ ಕೃಪೆಯಿಂದಾಗಿ ಈ ಊರು ಈಗ ಶ್ರೀಮಂತವಾಗಿದ್ದು, ತಮ್ಮ ಜಮೀನನ್ನು ಚೀನಾ ಹಾಗೂ ಭಾರತ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಗೆ ಬಿಟ್ಟುಕೊಟ್ಟಿದ್ದರಿಂದ ಅದಕ್ಕೆ ಪರಿಹಾರವಾಗಿ ಹಳ್ಳಿಗೆ 38 ಕೋಟಿ ಹಣ ಹಂಚಲಾಗಿದೆ. 

ಹಂತ ಹಂತವಾಗಿ ಇಲ್ಲಿನ ಅನೇಕ ಹಳ್ಳಿಗಳಿಗೆ ಭಾರತೀಯ ಸೇನೆ ಹಣವನ್ನು ಹಂಚಿಕೆ ಮಾಡುತ್ತಿದ್ದು, ಈ ಬಾರಿ ಬೊಂಬಿಲ ಹಳ್ಳಿಗೆ 38 ಕೋಟಿ ಹಣ ನೀಡಲಾಗಿದೆ.