ನವದೆಹಲಿ(ಸೆ.1): ಎರಡು ವರ್ಷಗಳ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಪತ್ತೆ ಕಾರ್ಯಾಚರಣೆಗಳಲ್ಲಿ . 56,378 ಕೋಟಿ ಬಹಿರಂಗ ಪಡಿಸದ ಆದಾಯವನ್ನು ಪತ್ತೆ ಹಚ್ಚಿದೆ ಮತ್ತು . 2,000 ಕೋಟಿ ಮೊತ್ತದ ನಗದನ್ನು ಮುಟ್ಟುಗೋಲು ಹಾಕಿಕೊಂಡಿದೆ. 2014ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಈ ಮಾಹಿತಿ ನೀಡಿದ್ದಾರೆ.

ಎಚ್‌ಎಸ್‌ಬಿಸಿ ಪಟ್ಟಿ ಹಾಗೂ ಪನಾಮ ಪೇಪರ್ಸ್‌ ದಾಖಲೆಗಳಲ್ಲಿ ಬಹಿರಂಗವಾದ ಹೆಸರುಗಳ ಬಗ್ಗೆ ಪರಿಶೀಲನೆ ನಡೆಸಲು ಸರ್ಕಾರ ಕ್ರಮಕೈಗೊಂಡಿದೆ ಎಂದು ಜೇಟ್ಲಿ ಹೇಳಿದ್ದಾರೆ.

ಜಾಗತಿಕ ಬ್ಯಾಂಕ್‌ ಮತ್ತು ಐಎಂಎಫ್‌ ಸಭೆಗಳಲ್ಲಿ ಭಾಗವಹಿಸುವ ಹಾಗೂ ಜಾಗತಿಕ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸುವ ಉದ್ದೇಶದಿಂದ ಸಚಿವ ಜೇಟ್ಲಿ ಭಾನುವಾರದಿಂದ ಏಳು ದಿನಗಳ ಕಾಲ ಕೆನಡಾ ಹಾಗೂ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.