ದರ್ಭಾಂಗಾ ವೈದ್ಯ ಕೀಯ ಕಾಲೇಜು ಆಸ್ಪತ್ರೆ (ಡಿಎಂಸಿಎಚ್)ಯಲ್ಲಿ ರ್ಯಾಗಿಂಗ್‌ನಲ್ಲಿ ಪಾಲ್ಗೊಂಡ ಕಾರಣಕ್ಕಾಗಿ 54 ವಿದ್ಯಾರ್ಥಿನಿಯರಿಗೆ ತಲಾ 25 ಸಾವಿರ ರು. ದಂಡ ವಿಧಿಸಲಾಗಿದೆ.
ದರ್ಭಾಂಗಾ (ಬಿಹಾರ): ಸಾಮಾನ್ಯವಾಗಿ ಕಾಲೇಜ್ನಲ್ಲಿ ಪುಂಡ ಹುಡುಗರು ರ್ಯಾಗಿಂಗ್ ಮಾಡುವುದು ಸಾಮಾನ್ಯ. ಆದರೆ, ದರ್ಭಾಂಗಾ ವೈದ್ಯ ಕೀಯ ಕಾಲೇಜು ಆಸ್ಪತ್ರೆ (ಡಿಎಂಸಿಎಚ್)ಯಲ್ಲಿ ರ್ಯಾಗಿಂಗ್ನಲ್ಲಿ ಪಾಲ್ಗೊಂಡ ಕಾರಣಕ್ಕಾಗಿ 54 ವಿದ್ಯಾರ್ಥಿನಿಯರಿಗೆ ತಲಾ 25 ಸಾವಿರ ರು. ದಂಡ ವಿಧಿಸಲಾಗಿದೆ.
ಬಿಹಾರದಲ್ಲಿ ಕಳೆದ 15 ದಿನದಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡಿದ ಕಾರಣಕ್ಕಾಗಿ ದಂಡ ವಿಧಿಸಿರುವುದು 2ನೇ ಬಾರಿಯಾಗಿದೆ.
ಹಾಗಾಗಿ, ರ್ಯಾಗಿಂಗ್ ನಡೆಸಿದ ಹಿರಿಯ ವಿದ್ಯಾರ್ಥಿನಿಯರಿಗೆ ದಂಡ ಕಟ್ಟಲು ಸೂಚಿಸಲಾಗಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಆರ್.ಕೆ. ಸಿನ್ಹಾ ತಿಳಿಸಿದ್ದಾರೆ.
(ಸಾಂದರ್ಭಿಕ ಚಿತ್ರ)
