ಪಾಕ್’ನಲ್ಲಿ 500 ಹಿಂದುಗಳ ಬಲವಂತದ ಮತಾಂತರ

First Published 28, Mar 2018, 8:27 AM IST
500 Hindus in Pakistan Forcefully converted to Islam
Highlights

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ 500 ಹಿಂದುಗಳನ್ನು ಮಾ.25ರಂದು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಮುಂಬೈ: ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ 500 ಹಿಂದುಗಳನ್ನು ಮಾ.25ರಂದು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಇವರಲ್ಲಿ ಹೆಚ್ಚಿನವರು ನಿರಾಶ್ರಿತರಾಗಿ ಭಾರತಕ್ಕೆ ಬಂದಿದ್ದರು. ಆದರೆ, ದೀರ್ಘಾವಧಿ ವೀಸಾ ದೊರೆಯದೇ ಇರುವ ಕಾರಣಕ್ಕೆ ಪಾಕಿಸ್ತಾನಕ್ಕೆ ಮರಳಿದ್ದರು.

ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ಅವರ ಆಲ್‌ ಪಾಕಿಸ್ತಾನ ಮುಸ್ಲಿಂ ಲೀಗ್‌ ಹಿಂದುಗಳ ಬಲವಂತದ ಮತಾಂತರವನ್ನು ಆಯೋಜಿಸಿತ್ತು. ಗನ್‌ ತೋರಿಸಿ 500 ಹಿಂದುಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಕುರಿತಾದ ವಿಡಿಯೋವೊಂದು ರಿಪಬ್ಲಿಕ್‌ ಟೀವಿಗೆ ಲಭ್ಯವಾಗಿದೆ.

 

loader