ರೈತ ಸುಜೀವನ್ ಕುಮಾರ್ ಅಧಿಕಾರಿಗಳಿಗೆ ಮಾಹಿತಿ ನೀಡಿ, ಹಣ ನೀಡಿದ ವರ್ತಕ ಯಾರೆಂದು ಪತ್ತೆ ಹಚ್ಚುವಂತೆ ಆಗ್ರಹಿಸಿದರು.
ರಾಮನಗರ(ಸೆ.09): ರೈತನಿಗೆ ವರ್ತಕನೊಬ್ಬ 500 ರೂಪಾಯಿಯ ಜೆರಾಕ್ಸ್ ನೋಟು ನೀಡಿ ಯಾಮಾರಿಸಿದ ಘಟನೆ ರಾಮನಗರದಲ್ಲಿ ನಡೆದಿದೆ. ಚನ್ನಪಟ್ಟಣದ ರೈತ ಸುಜೀವನ್ಕುಮಾರ್ ಎಪಿಎಂಸಿಯಲ್ಲಿ ಟೊಮ್ಯಾಟೋ ಮಾರಾಟ ಮಾಡಿದ್ದಾನೆ. ಈ ವೇಳೆ ವರ್ತಕ 500 ರೂಪಾಯಿಯ ಝೆರಾಕ್ಸ್ ನೋಟು ನೀಡಿ ಪರಾರಿಯಾಗಿದ್ದಾನೆ.
ರೈತ ಸುಜೀವನ್ ಕುಮಾರ್ ಹಣ ಎಣಿಸಿಕೊಳ್ಳುವ ವೇಳೆ ತನಗೆ ಮೋಸ ಮಾಡಿರೋದು ಗೊತ್ತಾಗುತ್ತೆಸ. ಆದರೆ ಅಷ್ಟರಲ್ಲಾಗಲೇ ನಕಲಿ ನೋಟು ನೀಡಿದ್ದವ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ರೈತ ಸುಜೀವನ್ ಕುಮಾರ್ ಅಧಿಕಾರಿಗಳಿಗೆ ಮಾಹಿತಿ ನೀಡಿ, ಹಣ ನೀಡಿದ ವರ್ತಕ ಯಾರೆಂದು ಪತ್ತೆ ಹಚ್ಚುವಂತೆ ಆಗ್ರಹಿಸಿದರು. ಮಾರುಕಟ್ಟೆಯಲ್ಲಿ ಖೋಟಾನೋಟುಗಳ ಹಾವಳಿ ಹೆಚ್ಚಾಗುತ್ತಿದೆ. ಕೂಡಲೇ ಪೊಲೀಸ್ರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
