8 ಕೋಟಿ ರೂ ವಂಚಿಸಿದವನಿಗೆ ಅಮೆರಿಕದಲ್ಲಿ 50 ವರ್ಷ ಜೈಲು

First Published 2, Jun 2018, 10:06 AM IST
50 years imprisonment in USA who fraud 8 crore to Bank
Highlights

ಕಾನೂನು ಉಲ್ಲಂಘನೆಯ ತಪ್ಪಿತಸ್ಥನೋರ್ವನಿಗೆ ಅಬ್ಬಬ್ಬಾ ಅಂದ್ರೆ, ಅದೆಷ್ಟುಕಠಿಣ ಶಿಕ್ಷೆ ವಿಧಿಸಬಹುದು. ಹೆಚ್ಚು ಅಂದ್ರೆ 10 ವರ್ಷ ಕಠಿಣ ಕಾರಾಗೃಹ ಅಥವಾ ಮರಣ ದಂಡನೆ ವಿಧಿಸಬಹುದು.  

ಬೆಂಗಳೂರು (ಜೂ. 02):  ಕಾನೂನು ಉಲ್ಲಂಘನೆಯ ತಪ್ಪಿತಸ್ಥನೋರ್ವನಿಗೆ ಅಬ್ಬಬ್ಬಾ ಅಂದ್ರೆ, ಅದೆಷ್ಟುಕಠಿಣ ಶಿಕ್ಷೆ ವಿಧಿಸಬಹುದು. ಹೆಚ್ಚು ಅಂದ್ರೆ 10 ವರ್ಷ ಕಠಿಣ ಕಾರಾಗೃಹ ಅಥವಾ ಮರಣ ದಂಡನೆ ವಿಧಿಸಬಹುದು. 

ಆದರೆ ಸರ್ಕಾರಿ ಅಧಿಕಾರಿ ಸೋಗಿನಲ್ಲಿ ಅಮೆರಿಕ ರೆಸ್ಟೋರೆಂಟ್‌ ಒಂದಕ್ಕೆ 1.2 ಮಿಲಿಯನ್‌(8 ಕೋಟಿ ರು.) ಡಾಲರ್‌ ವಂಚಿಸಿದವನಿಗೆ 50 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, 10 ಸಾವಿರ (7 ಲಕ್ಷ ರು.)ಡಾಲರ್‌ ದಂಡ ವಿಧಿಸಲಾಗಿದೆ. ಅಮೆರಿಕದ ಮಕ್ಕಳ ಪತ್ತೆ ಕೇಂದ್ರವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗಿಲ್ಬರ್ಟೊ ಎಸ್ಕಾಮಿಲ್ಲಾ ಎಂಬಾತನೇ ಶಿಕ್ಷೆಗೆ ಗುರಿಯಾದವ. ಕೌಂಟಿ ನಿಧಿಯಲ್ಲಿ ಆಹಾರ ತರಿಸಿಕೊಳ್ಳುತ್ತಿದ್ದ ಗಿಲ್ಬರ್ಟೊ ಅದನ್ನು ತನ್ನ ಸ್ವಂತ ಲಾಭಕ್ಕಾಗಿ ಬೇರೆಡೆ ಮಾರಿಕೊಳ್ಳುತ್ತಿದ್ದ.  

loader