ಮುಂಬೈ [ಜು.29]: ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯಲಿದ್ದು, ಇದೇ ವೇಳೆ 50ಕ್ಕೂ ಕಾಂಗ್ರೆಸ್ ಹಾಗೂ NCP ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. 

ಮಹಾರಾಷ್ಟ್ರ ನೀರಾವರಿ ಸಚಿವ ಗಿರಿಶ್ ಮಹಾಜನ್ ತಮ್ಮೊಂದಿಗೆ ಕಾಂಗ್ರೆಸಿಗರು ಸಂಪರ್ಕ ಹೊಂದಿರುವ ವಿಚಾರ ತಿಳಸಿದ್ದಾರೆ. 

ಈಗಾಗಲೇ NCP ನಾಯಕಿ ಚಿತ್ರಾ ವಾಘ್ ತಮ್ಮ ಅಸಮಾಧಾನ ಹೊರಹಾಕಿದ್ದು, ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದ್ದಾರೆ.  ತಮ್ಮ ಪಕ್ಷದಲ್ಲಿ ಭವಿಷ್ಯ ಇಲ್ಲದ ಕಾರಣ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂದರು. 

ಬಿಜೆಪಿ ಜೊತೆ ಕೈ ಜೋಡಿಸುವ ಸುಳಿವು ಕೊಟ್ಟ ಕಾಂಗ್ರೆಸ್ ಅನರ್ಹ ಶಾಸಕ

ಶೀಘ್ರ ವಿಧಾನಸಭಾ  ಚುನಾವಣೆ ನಡೆಯುತ್ತಿದ್ದು, ಇದೇ ವೇಳೆ ಬಿಜೆಪಿ ಸೇರ್ಪಡೆಯಾಗುವುದಾಗಿ ಕೇಳಿಕೊಂಡಿದ್ದಾರೆ. ಕೆಲ ವಾರಗಳಲ್ಲಿ ಎಲ್ಲರೂ ಸ್ವಪಕ್ಷ  ತೊರೆಯಲಿದ್ದಾರೆ ಎಂದು ಗಿರೀಶ್ ತಿಳಿಸಿದ್ದಾರೆ. 

ಕೈ ಕೊಟ್ಟ ಶಾಸಕ : ಬಿಜೆಪಿಗೆ ಸೇರ್ಪಡೆ

ಈಗಾಗಲೇ NCP ಮುಂಬೈ ಘಟಕದ ಅಧ್ಯಕ್ಷ  ಸಚಿನ್ ಅಹಿರ್ ಹಾಗೂ ಶಾಸಕ ವೈಭವ್ ಈಗಾಗಲೇ ಬಿಜೆಪಿ ಸೇರ್ಪಡೆಯಾಗಿದ್ದು, ಸೇರುವವರ ಸಂಖ್ಯೆ ಬೆಳೆಯುತ್ತಲೇ ಇದೆ ಎಂದರು.