ಕಡೂರು: ಬಿಜೆಪಿ ರಾಜ್ಯ ಮುಖಂಡರು ಡಿ. 3 ಸೋಮವಾರ ಬರಪೀಡಿತ ಕಡೂರು ತಾಲೂಕಿನಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ. ಒಟ್ಟು ಐದು ತಂಡಗಳಾಗಿ ಬಿಜೆಪಿ ಬರ ಅಧ್ಯಯನಕ್ಕೆ ಹೊರಡಲಿದೆ. 

ಬೆಳಗ್ಗೆ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ತಂಡವು ಕಡೂರು ತಾಲೂಕಿನಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ.

ತಂಡದಲ್ಲಿ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಇರಲಿದ್ದು, ತೆಂಗು ಸೇರಿ ವಿವಿಧ ಬೆಳೆ ಹಾನಿ ಸಮಸ್ಯೆಗಳ ಅಧ್ಯಯನ ಕೈಗೊಳ್ಳಲಿದ್ದಾರೆ. ಬರ ಅಧ್ಯಯನದ ನಂತರ ಈ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಮನವಿ ಮಾಡಲಿದ್ದಾರೆ.