ಈ ಮೊದಲು ಮೈಸುರು ಮತ್ತು ಸಲ್ಬೋನಿ ಠಂಕಸಾಲೆಗಳಲ್ಲಿ ನೋಟುಗಳನ್ನ ಪ್ರಿಂಟ್ ಮಾಡಲಾಗಿತ್ತು. ಇದೀಗ, ಮಧ್ಯಪ್ರದೇಶದ ನಾಸಿಕ್ ಮತ್ತು ದೆವಾಸ್ ಪ್ರೆಸ್`ಗಳಲ್ಲಿ 5000 ರೂ. ನೋಟುಗಳನ್ನ ಪ್ರಿಂಟ್ ಮಾಡಲಾಗಿದೆ. ಆರ್ಥಿಕ ವರ್ಷದಲ್ಲಿ 400 ಮಿಲಿಯನ್ 500 ರೂ. ನೋಫಟ್ ಮುದ್ರಣದ ಗುರಿ ಹೊಂದಲಾಗಿದೆಯಂತೆ.

ನಾಸಿಕ್(ನ.13): 500, 1000 ರೂಪಾಯಿ ಮುಖಬೆಲೆಯ ನೋಟುಗಳಿಗೆ ನಿಷೇಧ ಹೇರಿದ ಬಳಿಕ ಹಳೆ ನೋಟುಗಳನ್ನ ಬದಲಾಯಿಸಿಕೊಳ್ಳುವುದು ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗಿದೆ. ಬೇಕಾದಷ್ಟು ಪ್ರಮಾಣದಲ್ಲಿ ಕರೆನ್ಸಿ ಲಭ್ಯವಿಲ್ಲದ ಕಾರಣ ಜನ ನಾಲ್ಕೈದು ದಿನಗಳಿಂದ ಪರದಾಡುತ್ತಿದ್ದರು. ಈ ಸಮಸ್ಯೆ ಬಗೆಹರಿಸಲು ಹೊಸದಾಗಿ ಮತ್ತಷ್ಟು ನೊಟುಗಳನ್ನ ಪ್ರಿಂಟ್ ಮಾಡಲಾಗಿದೆ. ನಾಸಿಕ್`ನ ಠಂಕಸಾಲೆಯಿಂದ 5 ಮಿಲಿಯನ್`ನಷ್ಟು 500 ರೂಪಾಯಿ ನೂಟುಗಳನ್ನ ಪ್ರಿಂಟ್ ಮಾಡಿ ಆರ್`ಬಿಐಗೆ ರವಾನಿಸಲಾಗಿದೆ. ಇನ್ನುಳಿದ 5 ಮಿಲಿಯನ್ ನೋಟುಗಳನ್ನ ಭುಧವಾರ ರವಾನೆ ಮಾಡಲಾಗುತ್ತೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.