ಸುಂಕದಕಟ್ಟೆ ಬಳಿಯ ಹೇರೋಹಳ್ಳಿ ನಿವಾಸಿಗಳಾದ  ಭಾರತಿ(38) ರಮೇಶ್ (42), ಜಗದೀಶ್(46) ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೊಂದು ಘಟನೆಯಲ್ಲಿ ಶಿವಾನಂದ ಸರ್ಕಲ್ ಬಳಿ ಸ್ಲ್ಯಾಬ್ ಕುಸಿದು ಬೈಕ್ ಸವಾರ ವಯ್ಯಾಲಿ ಕಾವಲ್ ನಿವಾಸಿ ಅರುಣ್(18) ಸಾವನಪ್ಪಿದ್ದರು.

ಬೆಂಗಳೂರು(ಸೆ.09): ಮಳೆಯಿಂದ ಮೃತಪಟ್ಟ ಕುಟುಂಬಕ್ಕೆ ಸರ್ಕಾರಿ ನೌಕರಿ ಜೊತೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ಮೇಯರ್ ಜಿ. ಪದ್ಮಾವತಿ ಸುವರ್ಣ ನ್ಯೂಸ್'ಗೆ ತಿಳಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ನಂತರ ವಿಷಯ ತಿಳಿಸಿದರು. ನಗರದಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಜೆಸಿ ರಸ್ತೆಯ ಮಿನಿರ್ವ ಸರ್ಕಲ್ ಬಳಿ ಕಾರಿನ ಮೇಲ ಮರ ಬಿದ್ದು ಸುಂಕದಕಟ್ಟೆ ಬಳಿಯ ಹೇರೋಹಳ್ಳಿ ನಿವಾಸಿಗಳಾದ ಭಾರತಿ(38) ರಮೇಶ್ (42), ಜಗದೀಶ್(46) ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೊಂದು ಘಟನೆಯಲ್ಲಿ ಶಿವಾನಂದ ಸರ್ಕಲ್ ಬಳಿ ಸ್ಲ್ಯಾಬ್ ಕುಸಿದು ಬೈಕ್ ಸವಾರ ವಯ್ಯಾಲಿ ಕಾವಲ್ ನಿವಾಸಿ ಅರುಣ್(18) ಸಾವನಪ್ಪಿದ್ದರು. ದಾಖಲೆ ಮಳೆಯಾದ ಕಾರಣ ನೂರಾರು ಮರಗಳು ಧರೆಗುರುಳಿದ್ದವು.