25 ಲಕ್ಷ ಶೌಚಾಲಯ ನಿರ್ಮಿಸಿದ್ದೇವೆ, ಶುದ್ಧ ಕುಡಿಯುವ ನೀರಿನಲ್ಲಿ ಕ್ರಾಂತಿ ಮಾಡಿ 7 ಸಾವಿರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ 1.40 ಕೋಟಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಿದ್ದೇವೆ.

ಬೆಂಗಳೂರು(ಅ.2): ದಕ್ಷಿಣ ಕನ್ನಡ, ಉಡುಪಿ, ಕೊಡಗು, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳು, 20 ತಾಲೂಕುಗಳು ಮತ್ತು 1000 ಗ್ರಾಮ ಪಂಚಾಯತಿಗಳು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಗಾಂಧಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಈ ಐದು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಸನ್ಮಾನ ಮಾಡಿದರು. ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ಅನನ್ಯ ಸಾಧನೆ ಮಾಡಿದ ತುಮಕೂರು ಜಿಲ್ಲೆಯ ಬಾಲಕಿ ಲಾವಣ್ಯ, ಕೊಪ್ಪಳ ಜಿಲ್ಲೆ ಅಕ್ಕಮ್ಮ ಸೇರಿ 15 ಬಾಲಕಿಯರಿಗೆ ಹಾಗೂ ಭ್ರಷ್ಟಾಚಾರ ವಿರೋಧಿಸಿ ಗುತ್ತಿಗೆದಾರರಿಂದ ಲಂಚ ಸ್ವೀಕರಿಸದೆ ಪ್ರಮಾಣಿಕತೆ ಮೆರೆದಿದ್ದ ಕುಣಿಗಲ್ ತಾಲೂಕಿನ ನರೇಗಾ ಯೋಜನೆಯ ತಾಂತ್ರಿಕ ಸಲಹೆಗಾರ ಶ್ರೀನಿವಾಸ್ ಅವರಿಗೂ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಿದರು.

ನಂತರ ಮಾತನಾಡಿದ ಅವರು, ನಮ್ಮ ಸಕಾ೯ರ ಬಂದ ಮೇಲೆ ಮೊದಲ ಬಜೆಟ್'ನಲ್ಲೇ ಉತ್ತಮವಾಗಿ ಕಾಯ 9 ನಿವ೯ಹಿಸುವ ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಕೊಡುವುದಾಗಿ ಘೋಷಣೆ ಮಾಡಿದೆ. ಗ್ರಾಮ ಪಂಚಾಯಿತಿಗಳು ಉತ್ತಮ ರೀತಿ ಕಾಯ೯ನಿವ೯ಹಿಸಿದರೆ ಸಕಾ೯ರದ ಅನುದಾನ ಸದ್ಬಳಕೆಯಾಗುತ್ತದೆ. ಪ್ರತಿ ತಾಲೂಕಿನಲ್ಲಿ ಒಂದೊಂದು ಗ್ರಾ.ಪಂ ಆಯ್ಕೆ ಮಾಡಿ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗುತ್ತದೆ. ಪ್ರಶಸ್ತಿಯ ನಗದು ಬಹುಮಾನ 5 ಲಕ್ಷ ರೂ. ಇದಕ್ಕಾಗಿ 8 ಕೋಟಿ ರೂ. ಅನುದಾನ ನೀಡಲಾಗಿದೆ' ಎಂದರು.

ಗ್ರಾಮೀಣಾಭಿವೃದ್ಧಿ ಸಚಿವ ಎಚ್​.ಕೆ. ಪಾಟೀಲ್​ ಮಾತನಾಡಿ, 25 ಲಕ್ಷ ಶೌಚಾಲಯ ನಿರ್ಮಿಸಿದ್ದೇವೆ, ಶುದ್ಧ ಕುಡಿಯುವ ನೀರಿನಲ್ಲಿ ಕ್ರಾಂತಿ ಮಾಡಿ 7 ಸಾವಿರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ 1.40 ಕೋಟಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಿದ್ದೇವೆ. 500 ಕೋಟಿ ರೂ. ಅನುದಾನ ಕೊಟ್ಟರೆ ಕನಾ೯ಟಕವನ್ನು ಬಯಲು ಬಹಿದೆ೯ಸೆ ಮುಕ್ತ ಮಾಡುತ್ತೇವೆ ಎಂದರು.

ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಶಾಸಕ ಸುಧಾಕರ್ ಮುಂತಾದವರು ಉಪಸ್ಥಿತರಿದ್ದರು.