ಲೈಂಗಿಕ ಸಮ್ಮತಿಗೆ ಕನಿಷ್ಟ 15 ವರ್ಷ : ಕಾನೂನು ರಚನೆ

First Published 6, Mar 2018, 3:48 PM IST
5 as minimum age for sexual consent
Highlights

ಮದುವೆಯಾಗಲು ಕನಿಷ್ಟ ವಯೋಮಿತಿಯನ್ನು ನಿಗದಿ ಮಾಡಿದಂತೆ ಇದೀಗ ಸೆಕ್ಸ್’ಗೂ ಕೂಡ ವಯೋಮಿತಿಯೊಂದನ್ನು ಫಿಕ್ಸ್ ಮಾಡಲಾಗಿದೆ.  15 ವರ್ಷಕ್ಕಿಂತ ಮೊದಲು ಯಾರೂ ಕೂಡ ಸೆಕ್ಸ್’ನಲ್ಲಿ ಭಾಗಿಯಾಗುವಂತಿಲ್ಲ ಎಂದು ಫ್ರಾನ್ಸ್ ಸರ್ಕಾರ  ಕಾನೂನನ್ನು ಜಾರಿ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದೆ.

ಪ್ಯಾರಿಸ್ : ಮದುವೆಯಾಗಲು ಕನಿಷ್ಟ ವಯೋಮಿತಿಯನ್ನು ನಿಗದಿ ಮಾಡಿದಂತೆ ಇದೀಗ ಸೆಕ್ಸ್’ಗೂ ಕೂಡ ವಯೋಮಿತಿಯೊಂದನ್ನು ಫಿಕ್ಸ್ ಮಾಡಲಾಗಿದೆ.  15 ವರ್ಷಕ್ಕಿಂತ ಮೊದಲು ಯಾರೂ ಕೂಡ ಸೆಕ್ಸ್’ನಲ್ಲಿ ಭಾಗಿಯಾಗುವಂತಿಲ್ಲ ಎಂದು ಫ್ರಾನ್ಸ್ ಸರ್ಕಾರ  ಕಾನೂನನ್ನು ಜಾರಿ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದೆ.

15 ವರ್ಷಕ್ಕಿಂತ ಒಳಗಿನ ಯಾವುದೇ ಮಕ್ಕಳು ಕೂಡ ಸೆಕ್ಸ್ ಮಾಡುವಂತಿಲ್ಲ ಎಂದು ಹೇಳಿದೆ. 11 ವರ್ಷದ ಹುಡುಗಿಯರೊಂದಿಗೆ ಪುರುಷರು ಸೆಕ್ಸ್ ಮಾಡಿದ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಂತಹ ಕಾನೂನೊಂದನ್ನು ಜಾರಿ ಮಾಡುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಅಲ್ಲದೇ ಅಂತವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

 ಅತ್ಯಂತ ಕಡಿಮೆ ವಯಸ್ಸಿನಲ್ಲಿ ಸೆಕ್ಸ್  ಹೊಂದುವುದು ಆರೋಗ್ಯದ ದೃಷ್ಟಿಯಿಂದ ಸಮಸ್ಯಾತ್ಮಕವಾಗಿರುವುದರಿಂದ  ಈ ರೀತಿಯಾದ ಕಾನೂನನ್ನು ಜಾರಿ ಮಾಡಲು ಪ್ರಸ್ತಾಪಿಸಲಾಗುತ್ತಿದೆ ಎಂದು ಇಲ್ಲಿನ ಮಹಿಳಾ ಕಲ್ಯಾಣ ಸಚಿವಾಲಯವು ಹೇಳಿದೆ. ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಸೆಕ್ಸ್ ಮಾಡುವುದು ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು ಫ್ರಾನ್ಸ್ ಸಚಿವಾಲಯವು ಹೇಳಿದೆ.

loader