ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕಾಲಿಕ ಸಾವಿನಿಂದ ಆಘಾತಕ್ಕೊಳಗಾಗಿರುವ ತಮಿಳುನಾಡಿನ ಜನತೆ ಈವರೆಗೂ ತನ್ನ ದುಃಖದಿಂದ ಹೊರ ಬಂದಿಲ್ಲ. ಅಮ್ಮನ ಅಗಲಿಕೆಯನ್ನು ಅರಗಿಸಿಕೊಳ್ಳಲಾಗದೆ ತಮಿಳುನಾಡಿನಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 470ಕ್ಕೆ ಏರಿಕೆಯಾಗಿದೆ.
ಚೆನ್ನೈ(ಡಿ.12): ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕಾಲಿಕ ಸಾವಿನಿಂದ ಆಘಾತಕ್ಕೊಳಗಾಗಿರುವ ತಮಿಳುನಾಡಿನ ಜನತೆ ಈವರೆಗೂ ತನ್ನ ದುಃಖದಿಂದ ಹೊರ ಬಂದಿಲ್ಲ. ಅಮ್ಮನ ಅಗಲಿಕೆಯನ್ನು ಅರಗಿಸಿಕೊಳ್ಳಲಾಗದೆ ತಮಿಳುನಾಡಿನಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 470ಕ್ಕೆ ಏರಿಕೆಯಾಗಿದೆ.
ಜಯಲಲಿತಾ ಅವರ ಅಭಿಮಾನಿಗಳ ಸಾವು ಕುರಿತಂತೆ ಅಧಿಕೃತವಾಗಿ ಟ್ವಿಟರ್'ನಲ್ಲಿ ಹೇಳಿಕೆಕೊಂಡಿರುವ ಎಐಎಡಿಎಂಕೆ ಪಕ್ಷ, ಅಮ್ಮನ ಸಾವಿನಿಂದಾಗಿ ತಮಿಳುನಾಡು ತೀವ್ರ ಆಘಾತಕ್ಕೊಳಗಾಗಿದ್ದು, ಅಭಿಮಾನಿಗಳ ಸಾವಿನ ಸಂಖ್ಯೆ 470ಕ್ಕೆ ಏರಿಕೆಯಾಗಿದೆ ಎಂದು ಹೇಳಿಕೊಂಡಿದೆ.
ನಿನ್ನೆಯಷ್ಟೇ ಟ್ವಿಟರ್'ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದ ಎಐಎಡಿಎಂಕೆ ಪಕ್ಷಕ ಅಮ್ಮನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಹೃದಯಘಾತಕ್ಕೊಳಗಾಗಿ 280 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಿಕೊಂಡಿತ್ತು. ಅಲ್ಲದೆ, ಮೃತಪಟ್ಟ ಜನರ ಕುಟುಂಬಗಳಿಗೆ ತಲಾ ರೂ.3 ಲಕ್ಷ ಹಣವನ್ನು ಪರಿಹಾರವಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
