ವಾಷಿಂಗ್ಟನ್[ಆ.27]: ಅಮೆರಿಕದಲ್ಲಿನ ಯುವ ಸಮೂಹವು ಹಾಕಿಕೊಳ್ಳುವ ಬಟ್ಟೆಯ ಮೇಲೆ ಎಷ್ಟೊಂದು ಆಲಸಿತನ ಹೊಂದಿದ್ದಾರೆ ಎಂದರೆ, ಅವರು ತೊಡುವ ಒಳಉಡುಪನ್ನು ದಿನವೂ ಬದಲಾಯಿಸಲು ಹಿಂದೇಟು ಹಾಕುತ್ತಾರಂತೆ.

ಇನ್ನೂ ಕೆಲವರು ವಾರಗಟ್ಟಲೇ ಒಂದೇ ಒಳ ಉಡುಪಿನಲ್ಲೇ ಇರುತ್ತಾರಂತೆ. ಹೀಗಂತ ಒಂದು ಸಮೀಕ್ಷೆ ಹೇಳಿದೆ.

ಹೌದು, ಟಾಮಿ ಜಾನ್‌ ಎಂಬ ಒಳ ಉಡುಪು ತಯಾರಿಕಾ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ಶೇ.45ರಷ್ಟುಜನರು ತಮ್ಮ ಒಳ ಉಡುಪು, ಪ್ಯಾಂಟ್‌, ನಿಕ್ಕರ್‌ಗಳನ್ನು ಬದಲಾಯಿಸಲ್ಲವಂತೆ. ಇದರಲ್ಲಿ ಯುವತಿಯರೂ ಹಿಂದೆ ಬಿದ್ದಿಲ್ಲ ಎಂದಿದೆ ಸಮೀಕ್ಷೆ.