ಚೆನ್ನೈನಲ್ಲಿ ಇತ್ತೀಚೆಗೆ ಭಾರೀ ಅಗ್ನಿ ಆಕಸ್ಮಿಕಕ್ಕೆ ತುತ್ತಾಗಿ ಪೂರ್ಣ ಸುಟ್ಟುಕರಕಲಾದ ‘ಚೆನ್ನೈ ಸಿಲ್ಕ್ಸ್' ಕಟ್ಟಡದಲ್ಲಿ ಇದೀಗ ಭಾರೀ ಪ್ರಮಾಣದ ಚಿನ್ನ ಮತ್ತು ವಜ್ರಕ್ಕಾಗಿ ಹುಡುಕಾಟ ನಡೆದಿದೆ.

ಚೆನ್ನೈ(ಜೂ.03): ಚೆನ್ನೈನಲ್ಲಿ ಇತ್ತೀಚೆಗೆ ಭಾರೀ ಅಗ್ನಿ ಆಕಸ್ಮಿಕಕ್ಕೆ ತುತ್ತಾಗಿ ಪೂರ್ಣ ಸುಟ್ಟುಕರಕಲಾದ ‘ಚೆನ್ನೈ ಸಿಲ್ಕ್ಸ್' ಕಟ್ಟಡದಲ್ಲಿ ಇದೀಗ ಭಾರೀ ಪ್ರಮಾಣದ ಚಿನ್ನ ಮತ್ತು ವಜ್ರಕ್ಕಾಗಿ ಹುಡುಕಾಟ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಹುಮಹಡಿ ಕಟ್ಟಡದಲ್ಲಿ ವಸ್ತ್ರದ ಜೊತೆಗೆ ಚಿನ್ನ, ವಜ್ರದ ಅಂಗಡಿಯೂ ಇತ್ತು. ಘಟನೆ ನಡೆದ ದಿನ 400 ಕೆಜಿ ಚಿನ್ನ ಮತ್ತು 20 ಕೋಟಿ ರು. ಮೌಲ್ಯದ ವಜ್ರದ ಆಭರಣವನ್ನು ಲಾಕರ್‌ನಲ್ಲಿ ಇಡಲಾಗಿತ್ತು. ಕಟ್ಟಡದ ಈಗಿನ ಸ್ಥಿತಿಯಲ್ಲಿ ಅದನ್ನು ಪೂರ್ಣ ಧ್ವಂಸಗೊಳಿಸದೇ ಒಳಗೆ ಹೋಗುವುದು ಕಷ್ಟ. ಹೀಗಾಗಿ ಆದಷ್ಟುಬೇಗ ಕಟ್ಟಡ ಧ್ವಂಸಗೊಳಿಸಿ ಅದರೊಳಗಿಂದ ಚಿನ್ನ ಮತ್ತು ವಜ್ರ ಹೊರತೆಗೆಯುವ ಯತ್ನ ನಡೆದಿದೆ.

ಅಗ್ನಿ ಅವಘಡದಲ್ಲಿ ಕಟ್ಟಡದಲ್ಲಿದ್ದ 80 ಕೋಟಿ ರು. ಮೌಲ್ಯದ ಬಟ್ಟೆಕೂಡಾ ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ.