ಭಾರತದಲ್ಲಿನ ಅರ್ಧದಷ್ಟು ಭಾಷೆಗಳು ಮುಂದಿನ 50 ವರ್ಷಗಳಲ್ಲಿ ನಾಶವಾಗಲಿವೆ ಎಂಬ ಆತಂಕಕಾರಿ ಅಂಶವೊಂದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.

ನವದೆಹಲಿ(ಆ.04): ಭಾರತದಲ್ಲಿನ ಅರ್ಧದಷ್ಟು ಭಾಷೆಗಳು ಮುಂದಿನ 50 ವರ್ಷಗಳಲ್ಲಿ ನಾಶವಾಗಲಿವೆ ಎಂಬ ಆತಂಕಕಾರಿ ಅಂಶವೊಂದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತೀಯ ಜನರ ಭಾಷಾ ಸಮೀಕ್ಷೆ (ಪಿಎಸ್‌ಎಲ್‌ಐ) ಇತ್ತೀಚೆಗೆ ಬಿಡುಗಡೆಗೊಳಿಸಿದ ತನ್ನ 11ನೇ ಆವೃತ್ತಿಯ ವರದಿಯಲ್ಲಿ ಈ ಆತಂಕ ವ್ಯಕ್ತಪಡಿಸಿದೆ. ದೇಶದ ಜನರು ಸುಮಾರು 780 ವಿಭಿನ್ನ ಭಾಷೆಗಳನ್ನು ಮಾತನಾಡುತ್ತಾರೆ. ಇವುಗಳಲ್ಲಿ ಕನಿಷ್ಠ 400 ಭಾರತೀಯ ಭಾಷೆಗಳು ಮುಂದಿನ 50 ವರ್ಷಗಳಲ್ಲಿ ಅಳಿವಿನಂಚಿನಲ್ಲಿವೆ ಎಂದು ಪಿಎಸ್‌ಎಲ್‌ಐ ಅಧ್ಯಕ್ಷ ಜಿ.ಎನ್. ಡೇವಿ ಹೇಳಿದ್ದಾರೆ.

ಕಳೆದ ಐದು ದಶಕಗಳಲ್ಲಿ ಭಾರತದಲ್ಲಿ ಈಗಾಗಲೇ 250 ಭಾಷೆಗಳು ನಾಶವಾಗಿವೆ. ಅಳಿವಿನಂಚಿನಲ್ಲಿರುವ ಪ್ರಮುಖ ಭಾಷೆಗಳಲ್ಲಿ ಆದಿವಾಸಿ ಸಮುದಾಯಗಳಿಗೆ ಸೇರಿದ ಭಾಷೆಗಳು ಹೆಚ್ಚಿನ ಪ್ರಮಾಣದಲ್ಲಿವೆ. ಪಿಎಸ್‌ಎಲ್‌ಐನ ಸಂಶೋ‘ಕರು ಮತ್ತು ಶಿಕ್ಷಕರ ಸಮೂಹ ಜಗತ್ತಿನ 6000 ಭಾಷೆಗಳ ಕುರಿತ ದಾಖಲೆಗಳನ್ನು ರೂಪಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.