ಆಕೆಗೆ ಇಷ್ಟು ಮಕ್ಕಳು ಹೇಗೆ ಹೆರಲು ಸಾಧ್ಯವಾಯಿತು ಎಂಬುದು ವೈದ್ಯರಿಗೆ ಚಕಿತ ಪ್ರಶ್ನೆಯಾಗಿಯೇ ಉಳಿಯುವಂತಾಗಿದೆ.​

ನವದೆಹಲಿ(ಮಾ. 04): ಕೇವಲ 40 ವಯಸ್ಸಿಗೇ ಮಹಿಳೆಯೊಬ್ಬರು 69 ಮಕ್ಕಳ ಹೆತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಆದರೆ, ದುರದೃಷ್ಟಕ್ಕೆ ಪ್ಯಾಲೆಸ್ಟೀನ್ ದೇಶದ ಆ ಮಧ್ಯವಯಸ್ಕ ಮಹಿಳೆ 69ನೇ ಮಗು ಜನಿಸುತ್ತಲೇ ಇಹಲೋಕ ತ್ಯಜಿಸಿದ್ದಾರೆ. ನಿರಂತರವಾಗಿ ಹೆರಿಗೆಯಾಗುತ್ತಿದ್ದುದು ಆಕೆಯ ಸಾವಿಗೆ ಕಾರಣವೆಂದು ಝೀನ್ಯೂಸ್ ವರದಿ ಮಾಡಿದೆ.

ಇಲ್ಲಿ ಪ್ರಕಟವಾದ ವರದಿ ಪ್ರಕಾರ, ಆ ಪ್ಯಾಲೆಸ್ಟೀನ್ ಮಹಿಳೆ 27 ಬಾರಿ ಗರ್ಭವತಿಯಾಗಿದ್ದರು. 16 ಬಾರಿ ಎರಡು ಮಕ್ಕಳು; 7 ಬಾರಿ ಮೂರು ಮಕ್ಕಳು; ಹಾಗೂ ನಾಲ್ಕು ಬಾರಿ ನಾಲ್ಕು ಮಕ್ಕಳು ಒಮ್ಮೆಗೇ ಜನಿಸಿದ್ದವೆನ್ನಲಾಗಿದೆ. ಆದರೂ, ಆಕೆಗೆ ಇಷ್ಟು ಮಕ್ಕಳು ಹೇಗೆ ಹೆರಲು ಸಾಧ್ಯವಾಯಿತು ಎಂಬುದು ವೈದ್ಯರಿಗೆ ಚಕಿತ ಪ್ರಶ್ನೆಯಾಗಿಯೇ ಉಳಿಯುವಂತಾಗಿದೆ.