ಉದ್ಯಾನನಗರಿ ಬೆಂಗಳೂರಿನ ಹೆಮ್ಮೆ ಐತಿಹಾಸಿಕ‌ ಕೆ ಆರ್ ಮಾರುಕಟ್ಟೆ. ಕಣ್ಮುಂಚಿ ತೆಗೆಯೊದ್ರೊಳಗೆ ಈ ಮಾರುಕಟ್ಟೆ ಪ್ರಾಂಗಣದಲ್ಲಿ ಮಳಿಗೆಗಳು ತಲೆಯೆತ್ತಿದೆ. ಈ ಫ್ಲೋರ್ ಮಳಿಗೆ ಕಟ್ಟಿದವರು ಯಾರು ಅಂತ ಯಾರಿಗೂ ಗೊತ್ತಿಲ್ಲ. ಇದೆ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಸುವರ್ಣ ನ್ಯೂಸ್ ವರದಿ ಮಾಡಿದೆ.
ಬೆಂಗಳೂರು(ಜ.10): ಉದ್ಯಾನನಗರಿ ಬೆಂಗಳೂರಿನ ಹೆಮ್ಮೆ ಐತಿಹಾಸಿಕ ಕೆ ಆರ್ ಮಾರುಕಟ್ಟೆ. ಕಣ್ಮುಂಚಿ ತೆಗೆಯೊದ್ರೊಳಗೆ ಈ ಮಾರುಕಟ್ಟೆ ಪ್ರಾಂಗಣದಲ್ಲಿ ಮಳಿಗೆಗಳು ತಲೆಯೆತ್ತಿದೆ. ಈ ಫ್ಲೋರ್ ಮಳಿಗೆ ಕಟ್ಟಿದವರು ಯಾರು ಅಂತ ಯಾರಿಗೂ ಗೊತ್ತಿಲ್ಲ. ಇದೆ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಸುವರ್ಣ ನ್ಯೂಸ್ ವರದಿ ಮಾಡಿದೆ.
ಮಾರ್ಕೆಟ್ನಲ್ಲಿ 40 ಮಳಿಗೆಗಳು ತಲೆ ಎತ್ತಿದ್ರೂ ಯಾರೂ ಚಕಾರವೆತ್ತಿಲ್ಲ!
ಯಾರಿಗೂ ಗೊತ್ತಿಲ್ಲದೇ ಜನದಟ್ಟಣೆಯ ಮಧ್ಯೆ ಕೆ. ಆರ್ ಮಾರುಕಟ್ಟೆಯಲ್ಲಿ 40 ಮಳಿಗೆಗಳು ತಲೆ ಎತ್ತಿವೆ. ಐತಿಹಾಸಿಕ ಕೆ.ಆರ್. ಮಾರುಕಟ್ಟೆ ಮುಂಭಾಗದಲ್ಲೇ ನಾಲ್ಕುವರೆ ಅಡಿ ಎತ್ತರದ ೩೦ ರಿಂದ ೪೦ ಮಳಿಗೆಗಳ 80 ಪರ್ಸೆಂಟ್ ಕಾಮಗಾರಿ ಮುಗಿದಿದ್ದರೂ ಇದನ್ನ ಕಟ್ಟಿಸುತ್ತಿರುವುದು ಯಾರು ಎನ್ನುವುದು ಸ್ವತಃ ಪಾಲಿಕೆಗೆ ಗೊತ್ತಿಲ್ಲ.
ಬಿಬಿಎಂಪಿ ಸ್ವತ್ತು ಮಾರುಕಟ್ಟೆ ಈ ಅಂಗಣದಲ್ಲಿ ಕೇಂದ್ರ ಯೋಜನೆ ವಿಭಾಗ ಕಾಮಗಾರಿ ಮಾಡಿಲ್ಲ. ಆದರೂ ಕಳೆದ ಅಕ್ಟೋಬರ್ ತಿಂಗಳಲ್ಲೇ ಸ್ಥಳೀಯ ಶಾಸಕ ಜಮಿರ್ ಅಹಮದ್ ಮನವಿ ಮೇರೆಗೆ ವಾರ್ಡ್ ಮಟ್ಟದಲ್ಲಿ ಕಾಮಗಾರಿಗೆ ಯೋಜನೆ ಹಸ್ತಾಂತರವಾಗಿದೆ. ನಮಗೇನು ಗೊತ್ತೇಯಿಲ್ಲ ಎನ್ನುತ್ತಿದ್ದಾರೆ ಕೇಂದ್ರ ಯೋಜನಾ ವಿಭಾಗದ ಮುಖ್ಯ ಅಭಿಯಂತರರು.
ಜನದಟ್ಟಣೆ ಏರಿಯಾದಲ್ಲಿ ಕಟ್ಟಡ ಬಂದಿದ್ಹೇಗೆ ಅನ್ನೋದಕ್ಕೆ ಉತ್ತರ ಬೇಕಲ್ವಾ.. ಪಾಲಿಕೆ ಲ್ಯಾಂಡ್ ಆರ್ಮಿಯಿಂದ ಗುತ್ತಿಗೆ ಮೇಲೆ ಕಾಮಗಾರಿ ನಡೆಯುತ್ತಿದೆಯಾ ಎಂದು ನೋಡಿದರೆ ಅಲ್ಲೂ ಇಲ್ಲ. ಅಷ್ಟಕ್ಕೂ ಇಲ್ಲಿ ಮಳಿಗೆ ಅವಶ್ಯಕತೆನೇ ಇರಲಿಲ್ಲ ಎನ್ನುತ್ತಾರೆ ಮೇಯರ್.
ಬೀದಿ ಬದಿಯ ೨೪೯ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೆ ೨ ಕೋಟಿ ೨೦ ಲಕ್ಷ ವೆಚ್ಚದಲ್ಲಿ ಫ್ಲೋರ್ ಕಟ್ಟಲಾಗಿದೆ. ಇದನ್ನ ಕಟ್ಟಿಸುತ್ತಿರುವುದು ಯಾರು ಎನ್ನುವುದನ್ನು ತಿಳಿದುಕೊಳ್ಳಲು ಕಮೀಷನರ್'ಗೇ ಪತ್ರ ಬರೆಯಲು ಪಶ್ಚಿಮ ವಿಭಾಗ ಜಂಟಿ ಆಯುಕ್ತರು ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿ ಮಾಫಿಯಾ ನಡೆಯುತ್ತಿದೆ. ಲಂಚಕ್ಕೆ ಮಳಿಗೆ ನೀಡಲಾಗುತ್ತಿದೆ ಎನ್ನುವ ಆರೋಪವಿದೆ. ಆದರೆ ಪಾಲಿಕೆಯನ್ನು ಈ ಮಟ್ಟಿಗೆ ಯಾಮಾರಿಸುವ ಮಾಫಿಯಾ ಬೆಳೆದಿರುವ ನಿಜಕ್ಕೂ ಬೆಚ್ಚಿ ಬೀಳಿಸುವ ವಿಚಾರ.
