ಕಪ್ಪು ಹಣದ ಬೇಟೆಗೆ ನರೇಂದ್ರಮೋದಿ ನವೆಂಬರ್ 8ರಂದು 500 ಮತ್ತು 1000 ರೂಪಾಯಿ ನೋಟುಗಳನ್ನ ರದ್ದು ಮಾಡಿ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಚಿನ್ನದ ವ್ಯಾಪಾರ ಜೋರಾಗಿದೆ. ಹಳೆಯ ನೋಟುಗಳನ್ನ ನೀಡಿ 48 ಗಂಟೆಗಳಲ್ಲಿ 4 ಟನ್ ಬಂಗಾರ ಖರೀದಿಸಲಾಗಿದೆ. ಗ್ರಾಂ ಲೆಕ್ಕದಲ್ಲಿದ್ದ ಚಿನ್ನದಂಗಡಿಗಳ ವ್ಯಾಪಾರ ಅಂದು ಕೆ. ಜಿಗಟ್ಟಲೆಯಾಗಿದೆ. ಈ ಹಿನ್ನೆಲೆಯಲ್ಲಿ 300 ಚಿನ್ನದಂಗಡಿ ಮಾಲೀಕರಿಗೆ ಐಟಿ ನೋಟಿಸ್ ನೀಡಿದೆ.

ನವದೆಹಲಿ(ಜ.02): ನೋಟ್ ಬ್ಯಾನ್ ಆದ ಬಳಿಕ 48 ಗಂಟೆಗಳಲ್ಲಿ 4 ಟನ್ ಬಂಗಾರ ಸೇಲ್ ಆಗಿರುವ ಆಘಾತಕಾರಿ ಮಾಹಿತಿ ಇದೀಗ ಹೊರಬಿದ್ದಿದೆ. ನೋಟ್ ಬ್ಯಾನ್ ಆಗುತ್ತಿದ್ದಂತೆ ಹಳೆ ನೋಟುಗಳನ್ನ ತಂದು ಭಾರೀ ಪ್ರಮ಻ನದಲ್ಲಿ ಬಂಗಾರವನ್ನ ಖರೀದಿಸಲಾಗಿದೆ. ಬಹುತೇಕ ಻ಕ್ರಮ ಹಣದಲ್ಲಿ ಬಂಗಾರದ ಖರೀದಿಸಿರುವುದು ಮೇಲ್ನೋಟಕ್ಕೆ ತಿಳಿದುಬರುತ್ತಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಿನ್ನದಂಗಡಿ ಮಾಲೀಕರ ಬೆನ್ನತ್ತಿದ್ದಾರೆ.

ಚಿನ್ನದ ಮಾರಾಟ ಹೀಗಿತ್ತು..!

- ನ.8ರಂದು ದೆಹಲಿಯ ವ್ಯಾಪಾರಿ ಮಾರಿದ್ದು - 45 ಕೆಜಿ ಚಿನ್ನ
- 45 ಕೆಜಿ ಚಿನ್ನ ಮಾರಿದ್ದವನ ನ.7ರ ಬ್ಯುಸಿನೆಸ್ - 820 ಗ್ರಾಂ ಚಿನ್ನ
- ಚೆನ್ನೈನ ಲಲಿತಾ ಜ್ಯುವೆಲ್ಲರಿಯಲ್ಲಿ ನ.8ರಂದು 200 ಕೆ.ಜಿ ಬಂಗಾರ ಸೇಲ್
- 200 ಕೆಜಿ ಚಿನ್ನ ಮಾರಿದ್ದವನ ನ.7ರ ಬ್ಯುಸಿನೆಸ್ ಕೇವಲ 40 ಕೆಜಿ
- ಜೈಪುರದ ಲಾವತ್ ಜ್ಯುವೆಲ್ಲರಿಯಲ್ಲಿ ನ.8ರಂದು 30 ಕೆಜಿ ಚಿನ್ನ ಸೇಲ್
- 30 ಕೆಜಿ ಚಿನ್ನ ಮಾರಿದ್ದವನ ನ.7ರ ಸೇಲ್ 100 ಗ್ರಾಂ ಮಾತ್ರ