ಸರಣಿ ಹಿನ್ನಡೆಗಳಿಂದ ಆಘಾತಕ್ಕೆ ಒಳಗಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು , ಮಾನಸಿಕ ನೆಮ್ಮದಿಗಾಗಿ ಕುಟುಂಬದವರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಆದ್ರೆ ಇತ್ತ  ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ಬಿಗ್ ಶಾಕ್ ನೀಡಿದ್ದಾರೆ. 

ನವದೆಹಲಿ, [ಜೂ.20]: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯ ಸೋಲಿನ ಶಾಕ್ ನಲ್ಲೇ ಇದ್ದ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಟಿಡಿಪಿ ನಾಲ್ವರು ರಾಜ್ಯಸಭಾ ಸದಸ್ಯರು ಬಿಗ್ ಶಾಕ್ ನೀಡಿದ್ದಾರೆ. 

ಇಂದು [ಗುರುವಾರ] ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು.ರಾಜೀನಾಮೆ ಸಲ್ಲಿಸಿದ್ದ ತಡ ನೇರವಾಗಿ ನವದೆಹಲಿ ಹೋಗಿ ಬಿಜೆಪಿ ಸೇರ್ಪಡೆಯಾದರು.

ಜಗನ್, ಕೆಸಿಆರ್ ಪ್ರಧಾನಿ ಮೋದಿಯ ಸಾಕುನಾಯಿಗಳು: ನಾಯ್ಡು!

ಟಿಡಿಪಿ ರಾಜ್ಯಸಭಾ ಸದಸ್ಯರಾದ ವೈ.ಎಸ್‌. ಚೌಧರಿ, ಟಿಜಿ ವೆಂಕಟೇಶ್‌, ಸಿ. ಎಂ ರಮೇಶ್‌ ಹಾಗೂ ಟಿ.ಜಿ ವೆಂಕಟೇಶ್, ಬಿಜೆಪಿ ನೂತನ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದರು. ಈ ಮೂಲಕ 245 ಸದಸ್ಯರ ಪೈಕಿ ಬಿಜೆಪಿ 71 ಸ್ಥಾನಗಳೊಂದಿಗೆ ರಾಜ್ಯಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

Scroll to load tweet…

ಕಳೆದ ಲೋಕಸಭೆಯಲ್ಲಿ ಮೋದಿಯನ್ನ ಸೋಲಿಸ್ತೀನಿ ಎಂದು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಚಂದ್ರಬಾಬು ನಾಯ್ಡು ದೇಶ ಸುತ್ತಿದ್ದರು. ಆದ್ರೆ ತವರು ರಾಜ್ಯದಲ್ಲೇ ವಿಧಾನಸಭೆ, ಲೋಕಸಭೆಯಲ್ಲೂ ಟಿಡಿಪಿ ಹೀನಾಯವಾಗಿ ಸೋತಿತ್ತು.