ಕೆಳಗಿನ ಆಹಾರ ಕ್ರಮಗಳನ್ನು ಅನುಸರಿಸಿ ಕ್ಯಾನ್ಸರ್'ನಿಂದ ನಿಮ್ಮ ದೇಹವನ್ನು ಸಾಧ್ಯವಾದಷ್ಟು ಕಾಪಾಡಿಕೊಳ್ಳಿ.

ಪ್ರಸ್ತುತ ಆಧುನಿಕ ಪ್ರಪಂಚದಲ್ಲಿ ಮನುಷ್ಯನಿಗೆ ಹಲವಾರು ರೋಗಗಳು ಬಾಧಿಸುತ್ತಿವೆ. ಈ ಕಾಯಿಲೆಗಳಲ್ಲಿ ಕ್ಯಾನ್ಸರ್ ಪ್ರಮುಖವಾದುದು. ಒಂದು ಬಾರಿ ಮಾನವನ ದೇಹದೊಳಗೆ ಕ್ಯಾನ್ಸರ್ ರೋಗಾಣು ಕಾಲಿಟ್ಟರೆ ಸಾವು ಸಮೀಪಿಸಿದಂತೆ ಅರ್ಥ. ಈ ಮಹಾಮಾರಿಯಿಂದ ನಿಮ್ಮನ್ನು ನೀವು ರಕ್ಷಿಸಲು ಆಹಾರ ಕ್ರಮ, ನಿತ್ಯದ ದಿನಚರಿ ಅತಿ ಪ್ರಮುಖವಾದುದು. ಕೆಳಗಿನ ಆಹಾರ ಕ್ರಮಗಳನ್ನು ಅನುಸರಿಸಿ ಕ್ಯಾನ್ಸರ್'ನಿಂದ ನಿಮ್ಮ ದೇಹವನ್ನು ಸಾಧ್ಯವಾದಷ್ಟು ಕಾಪಾಡಿಕೊಳ್ಳಿ.

1) ಬಹುತೇಕ ಸಾವಯವ ಕೃಷಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸಿ

2) ಸಸ್ಯಾಹಾರವಾದರೆ ಉತ್ತಮ ಗುಣಮಟ್ಟದ ತಾಜಾ ಕಚ್ಚಾ ಅಥವಾ ಶುದ್ಧವಾದ ಆಹಾರ ಪದಾರ್ಥಗಳು ಅಥವಾ ಮಾಂಸಾಹಾರ ಸೇವಿಸುವವರು ಚೆನ್ನಾಗಿ ಬೇಯಿಸಿದ ಹಾಗೂ ಸುಟ್ಟಿರಬೇಕು.

3) ನೀವು ಸೇವಿಸುವ ಆಹಾರ ಪದಾರ್ಥದಲ್ಲಿ ಕೊಬ್ಬು ಕಡಿಮೆ ಪೌಷ್ಟಿಕಾಂಶ ಹೆಚ್ಚಿರುವ ತರಕಾರಿಗಳು ಹೆಚ್ಚಿರಲಿ.

4) ಹಾಲಿನಲ್ಲಿ ತಯಾರಿಸಿದ ಆಹಾರಗಳಾದರೆ ಕೊಬ್ಬಿನ ಅಂಶ ಕಡಿಮೆಯಿರುವ ಪದಾರ್ಥಗಳು ನಿಮ್ಮ ಆಯ್ಕೆಯಾಗಿರಲಿ

5) ಎಣ್ಣೆ,ತುಪ್ಪದ ಪದಾರ್ಥಗಳಾದರೆ ಆಲಿವ್ ರೀತಿಯ ಉತ್ತಮ ಗುಣಮಟ್ಟದಾಗಿರಲಿ.

6) ಸಕ್ಕರೆ ಅಂಶ ಕಡಿಮೆಯಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿ

ಮೇಲಿನ ಅಂಶಗಳಲ್ಲದೆ ನಿಮ್ಮ ದೈನಂದಿನ ಜೀವನ ಕ್ರಮವು ಪ್ರಮುಖವಾದುದು.ನಿತ್ಯ ಒಂದು ಗಂಟೆ ನಡಿಗೆ, ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. 3ರಿಂದ 4 ಲೀಟರ್ ನೀರು ಕುಡಿಯುವುದು ಉತ್ತಮ ಸದಾ ನಗೆ ಮುಖವಿರಲಿ, ಒತ್ತಡ ದೂರವಿರಲಿ.