ನಕ್ಸಲರೊಂದಿಗೆ ಗುಂಡಿನ ಚಕಮಕಿಯಲ್ಲಿ ನಾಲ್ವರು ಪೊಲೀಸರು ಹುತಾತ್ಮ

First Published 24, Jan 2018, 7:33 PM IST
4 Policemen Killed in Encounter With Naxals
Highlights
  • ಛತ್ತೀಸ್’ಗಢದ ನಾರಾಯಣಪುರ ಜಿಲ್ಲೆಯಲ್ಲಿ ಗುಂಡಿನ ಚಕಮಕಿ
  • ನಾಲ್ವರು ಪೊಲೀಸರು ಹುತಾತ್ಮ; 7 ಮಂದಿ ಗಾಯ

ರಾಯಪುರ: ಛತ್ತೀಸ್’ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಪೊಲೀಸರು ಹುತಾತ್ಮರಾಗಿದ್ದು, 7 ಮಂದಿ ಗಾಯಗೊಂಡಿದ್ದಾರೆ.

ನಕ್ಸಲರನ್ನು ಮಟ್ಟಹಾಕಲೆಂದೇ ರಚಿಸಲಾಗಿರುವ ಜಿಲ್ಲಾ ಮೀಸಲು ಪಡೆಯ (District Reserve Guard-DRG) ಇಬ್ಬರು ಸಬ್-ಇನಸ್ಪೆಕ್ಟರ್’ಗಳು ಹಾಗೂ ಇಬ್ಬರು ಕಾನ್ಸ್ಟೇಬಲ್ ಮೃತಪಟ್ಟಿದ್ದಾರೆಂದು  ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 11 ಗಂಟೆಗೆ ಅಭುಜ್ಮಾದ್ ದಟ್ಟಾರಣ್ಯ ಪ್ರದೇಶದಲ್ಲಿ ಗುಂಡಿನ ಕಾಳಗ ನಡೆದಿದೆ. ನಕ್ಸಲರಲ್ಲೂ ಕೆಲವರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ರಾಯಪುರ ಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಯ ಬಳಿಕ ಬಸ್ತರ್ ಪೊಲೀಸ್ ಐಜಿ ಕೂಡಾ ನಾರಾಯಣಪುರಕ್ಕೆ ಧಾವಿಸಿದ್ದಾರೆ.

loader