ನವದೆಹಲಿ(ಮೇ.30): ದೇಶದ 15ನೇ ಪ್ರಧಾನಿಯಾಗಿ ಮೋದಿ ಮತ್ತೆ ನಾಯಕನ ಹುದ್ದೆ ಅಲಂಕರಿಸಿದ್ದು, ರಾಷ್ಟ್ರಪತಿ ಭವನದ ಎದುರು ನಮೋ ಪಟ್ಟಾಭಿಷೇಕ ಅದ್ಧೂರಿಯಾಗಿ ನಡೆಯಿತು.

ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯದೊಂದಿಗೆ ಇಡೀ ವಿಶ್ವದ ಗಮನ ಸೆಳೆದಿರುವ ನರೇಂದ್ರ ಮೋದಿ, ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿದರು. 

ಇದೇ ವೇಳೆ ಕ್ಯಾಬಿನೆಟ್, ರಾಜ್ಯ ಖಾತೆ ಸೇರಿದಂತೆ ಒಟ್ಟು 58 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.  25 ಕ್ಯಾಬಿನೆಟ್, 9 ಸ್ವತಂತ್ರ ರಾಜ್ಯ ಖಾತೆ ಹಾಗೂ 24 ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಒಟ್ಟು 58 ಸಚಿವರ ಪೈಕಿ  6 ಮಹಿಳೆಯರು ಇದ್ದಾರೆ. ಇನ್ನು ಕರ್ನಾಟಕಕ್ಕೆ ನಾಲ್ಕು ಸಚಿವ ಸ್ಥಾನಗಳು ಸಿಕ್ಕಿವೆ.

ಡಿ.ವಿ.ಸದಾನಂದಗೌಡ- ಕ್ಯಾಬಿನೆಟ್ ಸಚಿವ

* ಬೆಂಗಳೂರು ಉತ್ತರ ಕ್ಷೇತ್ರದಿಂದ ಆಯ್ಕೆಯಾದ ಸಂಸದ
* 4 ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಅನುಭವಿ ರಾಜಕಾರಣಿ
* ಕಳೆದ ಬಾರಿ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಅನುಭವ 
* ಪಕ್ಷದಲ್ಲಿನ ಆಂತರಿಕ ಭಿನ್ನಮತ ನಿವಾರಿಸುವ ಸಂಘಟನಾ ಚತುರ 
* ಕರ್ನಾಟಕ ಸಿಎಂ ಆಗಿದ್ದ ಅನುಭವವುಳ್ಳ ರಾಜಕಾರಣಿ 
* ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡ 

ಪ್ರಹ್ಲಾದ್ ಜೋಶಿ-ಕ್ಯಾಬಿನೆಟ್ ಸಚಿವ


* ನಾಲ್ಕನೇ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಆಯ್ಕೆ 
* ಹುಬ್ಬಳ್ಳಿ - ಧಾರವಾಡ ಭಾಗದ ಪ್ರಬಲ ಬ್ರಾಹ್ಮಣ ಸಮುದಾಯದ ಮುಖಂಡ
* ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳೇ ಜೋಶಿ ಗೆಲುವಿಗೆ ಶ್ರೀರಕ್ಷೆ 
* ಹುಬ್ಬಳ್ಳಿ- ಧಾರವಾಡಕ್ಕೆ ಸ್ಮಾರ್ಟ್ಸಿಟಿ, ಐಐಟಿ ಮತ್ತು ಏಮ್ಸ್ ತರುವಲ್ಲಿ ಯಶಸ್ವಿ 
* ಕ್ಲೀನ್ ಇಮೇಜ್ ಮತ್ತು ಸುಲಭ ಲಭ್ಯತೆಯ ಕಾರಣದಿಂದ ಉತ್ತಮ ಅಭಿಪ್ರಾಯ
* ಕಳೆದ ಚುನಾವಣೆಗೂ ಮುನ್ನ ನೀಡಿದ್ದ ಬಹುತೇಕ ಭರವಸೆಗಳ ಈಡೇರಿಕೆ

ನಿರ್ಮಲಾ ಸೀತಾರಾಮನ್- ಕ್ಯಾಬಿನೆಟ್ ಸಚಿವೆ

2008ರಲ್ಲಿ  ಬಿಜೆಪಿಗೆ ಸೇರ್ಪಡೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರು  2014 ರಲ್ಲಿ ನರೇಂದ್ರ ಮೋದಿ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ 
2014 ರ ಜೂನ್ ನಲ್ಲಿ ಮೊದಲ ಬಾರಿಗೆ ಆಂಧ್ರಪ್ರದೇಶದಿಂದ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ನಂತರ  2017ರಲ್ಲಿ ಕರ್ನಾಟಕ ರಾಜ್ಯಸಭೆದಿಂದ ಆಯ್ಕೆಯಾಗಿ ಕೇಂದ್ರ ರಕ್ಷಣಾ ಸಚಿವೆಯಾಗಿದ್ದದ್ದರು. ಇದೀಗ ಮತ್ತೊಮ್ಮೆ ಮೋದಿ ಕ್ಯಾಬಿನೆಟ್ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

 ಸುರೇಶ್ ಅಂಗಡಿ- ಸ್ವತಂತ್ರ ರಾಜ್ಯ ಖಾತೆ ಸಚಿವ


*  ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ 4ನೇ ಬಾರಿಗೆ ಆಯ್ಕೆ
*  ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ಮುಖಂಡ 
* 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು 
*  ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಂಬಂಧಿ .