ಸಂಬಂಧಿಕರನ್ನು ಕೊಲೆ ಮಾಡಿದ್ದಾರೆ ಅನ್ನೊ ಆರೋಪದಡಿ 4 ಲಂಬಾಣಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಈ ನಾಲ್ಕು ಕುಟುಂಬ  ಇದೀಗ ಹೊಲದಲ್ಲಿ ಜೀವನ ಮಾಡುತ್ತಿದೆ.

ಕೋಲಾರ(ಅ.21): ಸಂಬಂಧಿಕರನ್ನು ಕೊಲೆ ಮಾಡಿದ್ದಾರೆ ಅನ್ನೊ ಆರೋಪದಡಿ 4 ಲಂಬಾಣಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಈ ನಾಲ್ಕು ಕುಟುಂಬ ಇದೀಗ ಹೊಲದಲ್ಲಿ ಜೀವನ ಮಾಡುತ್ತಿದೆ.

ಕಳೆದ 8 ತಿಂಗಳ ಹಿಂದೆ ದಮ್ಮೂರ ತಾಂಡಾದಲ್ಲಿ ರಾಮಣ್ಣ ರಾಠೋಡ ಸಂಭಂದಿ ಹನುಮಂತ ಚವ್ಹಾಣ್ ಅನ್ನೋ ವ್ಯಕ್ತಿ ಅನಾರೋಗ್ಯದ ಹಿನ್ನಲೆ ಮೃತಪಟ್ಟಿದ್ದ. ಆದ್ರೆ ಗ್ರಾಮದ ಜನ ಹಾಗೂ ತಾಂಡಾದವರು ನೀನೆ ಕೊಲೆ ಮಾಡಿದ್ದೀಯಾ ಎಂದು ಹನಮಪ್ಪ ರಾಠೋಡ ಅವರ ಮೇಲೆ ಆರೋಪ ಹೊರಸಿದ್ರಂತೆ. ಗ್ರಾಮದಲ್ಲಿ ಪಂಚಾಯತಿ ಮಾಡಿ 1 ಲಕ್ಷ 25 ಸಾವಿರ ಸಾವಿರ ದಂಡ ಕಟ್ಟುವಂತೆ ಒತ್ತಾಯ ಮಾಡಿದ್ದಾರೆ. ಆದ್ರೆ ರಾಮಣ್ಣ ರಾಠೋಡ ನಾನು ಅವನನ್ನು ಕೊಲೆ ಮಾಡಿಲ್ಲ , ದಂಡ ಕಟ್ಟೋದಿಲ್ಲ ಎಂದಿದ್ದಕ್ಕೆ ರಾಮಣ್ಣ ರಾಠೋಡ್ ಹಾಗೂ ಅವರ ಮೂವರು ಸಹೋದರರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. 

ದಮ್ಮೂರ ತಾಂಡಾದ ಕಮಲಪ್ಪ ನಾಯಕ್, ಈರಪ್ಪ ರೇವಣಕಿ, ಕಳಕಪ್ಪ ಸೇರಿದಂತೆ 10 ಜನ ನಾಲ್ಕು ಕುಟುಂಬವನ್ನು ಬಹಿಷ್ಕಾರ ಹಾಕಿದ್ದಾರಂತೆ. ಇನ್ನು 4ತಿಂಗಳ ಹಿಂದೆಯೆ ಯಲಬುರ್ಗಾ ಪೊಲೀಸ್ ಠಾಣೆಗೆ ದೂರು ಕೊಟ್ರು ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.

ಬಹಿಷ್ಕಾರಕ್ಕೆ ಒಳಗಾದ ಕುಟುಂಬ ನಿನ್ನೆ ದೀಪಾವಳಿ ಇರುವ ಪ್ರಯುಕ್ತ ಗ್ರಾಮದಲ್ಲಿರುವ ತಮ್ಮ ಮನೆಗೆ ಬಂದು ಹಬ್ಬ ಆಚರಿಸಬೇಕು ಎಂದು ಕೋಂಡಾಗ ಕಮಲಪ್ಪ ನಾಯಕ ಎಂಬಾತರು ಅವರ ಮೇಲೆ ಹಲ್ಲೆ ಮಾಡಿದ್ದಾರೆ.