ಸಿದ್ದರಾಮಯ್ಯ ಅವರು ಇಂದು ಮಂಡಿಸಿರುವುದು 13ನೇ ಬಜೆಟ್ ಸುಮಾರು 4 ಗಂಟೆ 10 ನಿಮಿಷದವರೆಗೆ ನಿರಂತರವಾಗಿ ನಿಂತು ಬಜೆಟ್ ಭಾಷಣ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಪ್ರಸಕ್ತ ಸಾಲಿನ ಬಜೆಟ್’ನ್ನು ಮಂಡಿಸಿದ್ದಾರೆ. ಸುಮಾರು 4 ಗಂಟೆ 10 ನಿಮಿಷದವರೆಗೆ ನಿರಂತರವಾಗಿ ನಿಂತು ಬಜೆಟ್ ಭಾಷಣ ಮಾಡಿರುವುದು ವಿಶೇಷವಾಗಿತ್ತು. ಸಿದ್ದರಾಮಯ್ಯ ಅವರು ಇಂದು ಮಂಡಿಸಿರುವುದು 13ನೇ ಬಜೆಟ್.
ಇಂದಿನ ಬಜೆಟ್ ಸಿದ್ಧಪಡಿಸುವುದರಲ್ಲಿ ಸಾಕಷ್ಟುಸಂಖ್ಯೆಯಲ್ಲಿ ಆರ್ಥಿಕ ತಜ್ಞರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಆದರೆ, ಕೋರ್ ಟೀಮ್‌ನಂತೆ ಕೆಲಸ ಮಾಡಿ ಬಜೆಟ್ ರೂಪಿಸಿರುವುದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಏಳು ಜನರ ತಂಡ.
ಆರ್ಥಿಕ ವಿಚಾರಗಳಲ್ಲಿ ಬಹಳ ಅನುಭವ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ಬಾರಿಯ ಬಜೆಟ್ ಸಿದ್ಧಪಡಿಸಲು ಸಮರ್ಥ ಅಧಿಕಾರಿಗಳ ತಂಡವೇ ಸಾಥ್ ನೀಡಿದೆ.
ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್, ಕಾರ್ಯದರ್ಶಿಗಳಾದ ಋುತ್ವಿಕ್ ರಂಜನ್ ಪಾಂಡೆ (ಬಜೆಟ್ ಮತ್ತು ಸಂಪನ್ಮೂಲ) ಏಕ್‌ರೂಪ್ ಕೌರ್ (ವೆಚ್ಚ), ಡಾ.ಡಿ.ಎಸ್. ರವೀಂದ್ರನ್ (ಖಜಾನೆ) ಮೊದಲ ಹಂತದ ಅಧಿಕಾರಿಗಳಾಗಿದ್ದು, ಒಟ್ಟಾರೆ ಬಜೆಟ್ ಸಿದ್ಧಪಡಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿರುತ್ತದೆ.
