ಕಾಣೆಯಾದ 39 ಜನರು ಮೃತಪಟ್ಟಿದ್ದಾರೆ : ಸುಷ್ಮಾ ಸ್ವರಾಜ್ ಘೋಷಣೆ

First Published 20, Mar 2018, 12:28 PM IST
39 Indians Missing in Iraqs Mosul since 2014 are dead
Highlights

ಇರಾಕ್ ಮೊಸುಲ್'ನಲ್ಲಿ 2014ರಿಂದ ಕಾಣೆಯಾಗಿದ್ದ 39 ಮಂದಿ ಭಾರತೀಯರೆಲ್ಲರೂ ಮೃತಪಟ್ಟಿದ್ದಾಗಿ  ವಿದೇಶಾಂಗ  ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇದೀಗ ಮಾಹಿತಿ ನೀಡಿದ್ದಾರೆ.

ನವದೆಹಲಿ : ಇರಾಕ್ ಮೊಸುಲ್'ನಲ್ಲಿ 2014ರಿಂದ ಕಾಣೆಯಾಗಿದ್ದ 39 ಮಂದಿ ಭಾರತೀಯರೆಲ್ಲರೂ ಮೃತಪಟ್ಟಿದ್ದಾಗಿ  ವಿದೇಶಾಂಗ  ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇದೀಗ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಂಗಳವಾರ ಸುಷ್ಮಾ ಸ್ವರಾಜ್ ಅಧಿಕೃತ ಮಾಹಿತಿಯನ್ನು ಹೊರಹಾಕಿದ್ದಾರೆ. ಅವರ ಸಂಬಂಧಿಗಳ ಡಿಎನ್’ಎಯೊಂದಿಗೆ ಮೃತದೇಹಗಳ ಡಿಎನ್ಎ ಪರೀಕ್ಷೆ ನಡೆಸಿ ಮ್ಯಾಚ್ ಮಾಡಲಾಗಿದ್ದು,  ವೇಳೆ ಅವರು ಮೃತಪಟ್ಟಿದ್ದಾಗಿ ದೃಢಪಟ್ಟಿದೆ ಎಂದು ಸುಷ್ಮಾ ಸ್ವರಾಜ್  ರಾಜ್ಯ ಸಭೆಯಲ್ಲಿ ತಿಳಿಸಿದ್ದಾರೆ.

ಈ ಎಲ್ಲರನ್ನೂ ಕೂಡ ಕ್ರೂರವಾದ ಇಸ್ಲಾಮಿಕ್ ಉಗ್ರ ಸಂಘಟನೆಯು ಹತ್ಯೆ ಮಾಡಿದೆ ಎಂದು ತಿಳಿಸಿದ್ದಾರೆ. ಇವರೆಲ್ಲರೂ ಕೂಡ ಪಂಜಾಬ್, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಬಿಹಾರದವರೆಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ. 

38 ಮೃತದೇಹಗಳೊಂದಿಗೆ ಅವರ ಸಂಬಂಧಿಗಳ ಡಿಎನ್ಎ ಮ್ಯಾಚ್ ಆಗಿದೆ. ಇನ್ನೊಂದು ಮೃತದೇಹದ ಡಿಎನ್’ಎ ಶೇ.70ರಷ್ಟು ಮ್ಯಾಚ್ ಆಗಿದೆ ಎಂದು ತಿಳಿಸಿದ್ದಾರೆ.

loader