ಇನ್ನು ಡ್ಯಾಂನ ಕೆಲ ಭಾಗ ಒಡೆದುಹೋದ ಕಾರಣ ಅಪಾರ ಪ್ರಮಾಣದ ನೀರು ಪೋಲಾಗಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರವಾಹವುಂಟಾಗಿದೆ.
ಪಾಟ್ನಾ(ಸೆ.20): ಬಿಹಾರದ ಪಾಟ್ನಾದಲ್ಲಿ ಉದ್ಘಾಟನೆಗೂ ಮುನ್ನವೇ ಡ್ಯಾಂ ಒಡೆದುಹೋಗಿದೆ. ಇದ್ರಿಂದಾಗಿ ಅಣೆಕಟ್ಟು ನಿರ್ಮಾಣಕ್ಕೆ ಖರ್ಚು ಮಾಡಿದ್ದ 389 ಕೋಟಿ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಇಂದು ಬಿಹಾರ ಸಿಎಂ ನಿತೀಶ್ ಕುಮಾರ್, ಭಗಲ್ಪುರ ಜಿಲ್ಲೆಯ ಕಹಲ್ಗಾವ್ನಲ್ಲಿ ನಿರ್ಮಾಣವಾಗಿರೋ ಡ್ಯಾಂ ಅನ್ನ ಉದ್ಘಾಟನೆ ಮಾಡಬೇಕಿತ್ತು. ಆದರೆ, ಗಂಗಾ ನದಿಗೆ ಅಡ್ಡಲಾಗಿ ಕಟ್ಟಿರೋ ಅಣೆಕಟ್ಟಿನ ಕೆಲ ಭಾಗ ಒಡೆದುಹೋದ ವಿಚಾರ ನಿತೀಶ್ ಗಮನಕ್ಕೆ ಬರುತ್ತಿದ್ದಂತೆ, ಭಗಲ್ಪುರ ಭೇಟಿಯನ್ನ ರದ್ದುಗೊಳಿಸಿದ್ದಾರೆ. ಇನ್ನು ಡ್ಯಾಂನ ಕೆಲ ಭಾಗ ಒಡೆದುಹೋದ ಕಾರಣ ಅಪಾರ ಪ್ರಮಾಣದ ನೀರು ಪೋಲಾಗಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರವಾಹವುಂಟಾಗಿದೆ. ಇದರಿಂದ ನಿತೀಶ್ ಕುಮಾರ್ ಸರ್ಕಾರಕ್ಕೆ ಮುಜುಗರವುಂಟಾಗಿದೆ. ಗತೇಶ್ವರ್ ಪಂಥ್ ಕ್ಯಾನಲ್ ಯೋಜನೆಯ ಭಾಗವಾಗಿದ್ದ ಅಣೆಕಟ್ಟು ಆ ಭಾಗದ ಭೂ ನೀರಾವರಿ ವ್ಯವಸ್ಥೆಯನ್ನು ಬಲ ಪಡಿಸುವಲ್ಲಿ ಸಹಕಾರಿಯಾಗಲಿದೆ ಎನ್ನಲಾಗಿತ್ತು. ಕಹಲ್ಗಾವ್ನ ವಸತಿ ಪ್ರದೇಶಗಳಿಗೆ ಅಣೆಕಟ್ಟಿನಿಂದ ಹರಿದು ಬಂದು ನೀರು ನುಗ್ಗಿದ ಕಾರಣ ಪ್ರವಾಹದಂತಹ ಪರಿಸ್ಥಿತಿ ಅಲ್ಲಿ ಉಂಟಾಗಿದೆ.
