ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತ ದೇಹ ಆನೇಕಲ್‌ನ ಬೃಂದಾವನ ಲೇಔಟ್‌ನಲ್ಲಿ ಪತ್ತೆಯಾಗಿದೆ.

ಆನೇಕಲ್, (ಸೆ.17): ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತ ದೇಹ ಆನೇಕಲ್‌ನ ಬೃಂದಾವನ ಲೇಔಟ್‌ನಲ್ಲಿ ಪತ್ತೆಯಾಗಿದೆ. ಹತ್ಯೆಯಾದ ವ್ಯಕ್ತಿಯನ್ನು ತಮಿಳುನಾಡಿನ ಕೃಷ್ಣಗಿರಿ ಮೂಲದ ಮುನಿರಾಜು (35) ಎಂದು ಗುರುತಿಸಲಾಗಿದೆ.

3 ದಿನಗಳ ಹಿಂದೆಯೇ ದುಷ್ಕರ್ಮಿಗಳು ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.