ಜೈಪುರ[ಜೂ.19]: ರಾಜಸ್ಥಾನದಲ್ಲಿ ಒಂದು ದಶಕಗಳಿಗೂ ಹೆಚ್ಚು ಕಾಲ ವಾಸವಾಗಿದ್ದ 34 ಪಾಕಿಸ್ತಾನಿ ವಲಸಿಗರಿಗೆ ಜೂನ್ ತಿಂಗಳಲ್ಲಿ ರಾಜಸ್ಥಾನ ಸರ್ಕಾರ ಭಾರತೀಯ ಪೌರತ್ವ ನೀಡಿದೆ.

ಬಾರ್ಮೇಡ್‌ನ 19, ಪಾಲಿಯ 10 ಮತ್ತು ಜಾಲೋರ್‌ನಲ್ಲಿ ನೆಲೆಸಿರುವ 5 ಜನರಿಗೆ ಈ ಪೌರತ್ವ ನೀಡಲಾಗಿದೆ. 2019 ಜ.1 ರಿಂದ ಜೂ.17ರವರೆಗೆ ಒಟ್ಟು 79 ಪಾಕ್ ವಲಸಿಗರಿಗೆ ಭಾರತೀಯ ಪೌರತ್ವ ನೀಡ\ಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಾಜೀವ್ ಸ್ವರೂಪ್ ತಿಳಿಸಿದ್ದಾರೆ.

ಇತ್ತೀಚಿಗೆ ಕೇಂದ್ರ ಸರ್ಕಾರ ನಾಗರೀಕ ಕಾಯ್ದೆಯಡಿ ಮುಸ್ಲಿಮೇತರ ವಲಸಿಗರಿಗೆ ಈ ಭಾರತೀಯ ಪೌರತ್ವ ನೀಡುವ ಕಾಯ್ದೆ ಜಾರಿಗೆ ತಂದಿದೆ.