ಇನ್ನೇನು ಚುನಾವಣೆ ಸಮೀಪಿಸುತ್ತಿದ್ದು ಟಿಕೆಟ್ ಹಂಚಿಕೆಗಳ ಬಗ್ಗೆ ಭರ್ಜರಿ ಚರ್ಚೆ ಆರಂಭವಾಗಿದೆ. ಇದೇ ವೇಳೆ ರಾಜಸ್ಥಾನದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಟಿಕೆಟ್ ನಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಲಾಗಿದೆ. 

ಜೈಪುರ : ಎಲ್ಲಾ ರಾಜಕೀಯ ಪಕ್ಷಗಳೂ ಕೂಡ ಮಹಿಳಾ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಚರ್ಚೆ ಮಾಡಿದರೂ ಕೂಡ ಪಕ್ಷದಿಂದ ಮಹಿಳೆಯರನ್ನು ಕಣಕ್ಕಿಳಿಸುವಲ್ಲಿ ಮಾತ್ರ ಹಿಂದೆ ಬಿದ್ದಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದರಂತೆ ರಾಜಸ್ಥಾನದಲ್ಲಿ ಕಳೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡರಲ್ಲಿಯೂ ಕೂಡ ಶೇ 20ರಷ್ಟು ಟಿಕೆಟ್ ಗಳನ್ನೂ ಕೂಡ ಮಹಿಳೆಯರಿಗೆ ನೀಡಿರಲಿಲ್ಲ. 

ಆದರೆ ಇದೀಗ ರಾಜಸ್ಥಾನ ಬಿಜೆಪಿ ಇದೀಗ ಬದಲಾವಣೆಯನ್ನು ತರಲು ತೀರ್ಮಾನಿಸಿದೆ. ಬಿಜೆಪಿ ಮಹಿಳಾ ಮೋರ್ಚಾ ಪ್ರತೀ ಜಿಲ್ಲೆಯಲ್ಲಿಯೂ ಒಂದು ಟಿಕೆಟ್ ಮಹಿಳೆಗೆ ಕೊಡಲು ಆಗ್ರಹಿಸಿದೆ. 

ಇದೇ ರೀತಿ ಕಾಂಗ್ರೆಸ್ ಮಹಿಳಾ ಮುಖಂಡರೂ ಕೂಡ ಟಿಕೆಟ್ ಹಂಚಿಕೆಯಲ್ಲಿ ಶೇ.33ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದೆ.