ಎಲ್ಲದಕ್ಕೂ ಒಂದು ಮಿತಿಯಿರುತ್ತದೆ. ಅತಿಯಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ.

ನವದೆಹಲಿ. [ಅ,05] : ಎಲ್ಲದಕ್ಕೂ ಒಂದು ಮಿತಿಯಿರುತ್ತದೆ. ಅತಿಯಾದರೆ ಪರಿಣಾಮ ಎದುರಿಸಬೇಕಾಗುತ್ತದೆ. ಇದಕ್ಕೆ ಉದಾರಹಣೆ ಎಂಬಂತೆ 31 ವರ್ಷದ ವ್ಯಕ್ತಿಯೊಬ್ಬರು ಲೈಂಗಿಕ ತೃಪ್ತಿಯಾಗಿ ಹೆಚ್ಚು ವಯಾಗ್ರ ಸೇವಿಸಿ, ದೃಷ್ಟಿ ಕಳೆದುಕೊಕೊಂಡಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ವ್ಯಕ್ತಿಯೊಬ್ಬರು ಆನ್‍ಲೈನ್ ಮೂಲಕ ವಯಾಗ್ರ ಖರೀದಿಸಿದ್ದು, ನಿತ್ಯವೂ 50 ಗ್ರಾಂ ಗಿಂತ ಹೆಚ್ಚಿನ ಪ್ರಮಾಣದಲ್ಲಿ ವಯಾಗ್ರಾ ಸೇವಿಸಿದ್ದಾರೆ. ಹೀಗಾಗಿ ಅವರು ದೃಷ್ಟಿ ದೋಷದಿಂದ ಬಳಲುವ ಪರಿಸ್ಥಿತಿ ಎದುರಾಗಿದೆ.

ವಸ್ತುಗಳು ಮಂಜು ಮಂಜಾಗಿ ಕಾಣಿಸಲು ಪ್ರಾರಂಭಿಸಿದ್ದು, ಇದರಿಂದ ಭಯಗೊಂಡಿದ್ದಾನೆ. ಕೂಡಲೇ ವೈದ್ಯರನ್ನು ಭೇಟಿಯಾಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ತಪಾಸಣೆಗೆ ಒಳಪಡಿಸಿ ವೈದ್ಯರು, ಅತಿಯಾದ ವಯಾಗ್ರ ಸೇವನೆ ಮಾಡಿದ್ದೆ ಈ ಸಮಸ್ಯೆಗೆ ಕಾರಣ ಎಂದು ಖಚಿತಪಡಿಸಿದ್ದಾರೆ.