ರಾಯಗಢ(ಮಹಾರಾಷ್ಟ್ರ)[ಡಿ.17]: ಇಲ್ಲಿನ ಕೈಗಾರಿಕೆಯೊಂದರಿಂದ ಸೋರಿಕೆಯಾದ ವಿಷಾನಿಲದ ಪರಿಣಾಮ ಸುಮಾರು 30 ಮಂಗಗಳು ಮತ್ತು 14 ಪಾರಿವಾಳಗಳು ಮೃತಪಟ್ಟಿರುವ ದುರಂತ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ರಸಾಯನ ಸಂಗ್ರಹಿಸಲಾಗಿದ್ದ ಟ್ಯಾಂಕ್‌ನಿಂದ ವಿಷಾನಿಲ ಸೋರಿಕೆಯಿಂದ ಈ ದುರಂತ ಸಂಭವಿಸಿರಬಹುದು ಎಂದು ಕೈಗಾರಿಕೆ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿ. ಘಟಕದಿಂದ ವಿಷಾನಿಲ ಸೋರಿಕೆಯಿಂದಾದ ಈ ಘಟನೆ ನಿಜಕ್ಕೂ ದುರದೃಷ್ಟಕರ ಎಂದು ರಾಯಗಢ ಜಿಲ್ಲಾಧಿಕಾರಿ ವಿಜಯ್‌ ಸೂರ್ಯವಂಶಿ ಹೇಳಿದ್ದಾರೆ.

ಘಟನೆ ಬೆನ್ನಲ್ಲೇ, ಅರಣ್ಯ ಇಲಾಖೆ, ಮಹಾರಾಷ್ಟ್ರ ಮಾಲಿನ್ಯ ನಿಇಯಂತ್ರಣ ಮಂಡಳಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.