ಅಂಗಡಿ ಮುಂದೆ ಇಡಲಾಗಿದ್ದ ಟೊಮೆಟೋಗಳನ್ನು ಖದೀಮರು ರಾತ್ರೋ ರಾತ್ರಿ ಲಪಟಾಯಿಸಿದ್ದಾರೆ. ಮಾರನೇ ದಿನ ಅಂಗಡಿಗೆ ಬರುವಷ್ಟರಲ್ಲಿ ಟೊಮೆಟೋ ಮತ್ತು ಕ್ರೇಟ್‌'ಗಳು ಎಲ್ಲವೂ ಮಾಯವಾಗಿದ್ದವು.

ಮುಂಬೈ: ದೇಶದಲ್ಲಿ ಟೊಮೆಟೋ ದರ ದಿನ ದಿನಕ್ಕೆ ಗಗನಕ್ಕೇರುತ್ತಿದೆ. ಹಾಗಾಗಿ, ಟೊಮೆಟೋಗೆ ಇದೀಗ ಚಿನ್ನದ ಬೆಲೆ ಬಂದಿದೆ. ಹಾಗಾಗಿ, ಮುಂಬೈ ಮಾರುಕಟ್ಟೆಯಲ್ಲಿ 300 ಕೆಜಿ ತೂಕದ ಸುಮಾರು 30 ಸಾವಿರ ರು. ಮೌಲ್ಯದ ಟೊಮೆಟೋಗಳನ್ನು ದರೋಡೆ ಮಾಡಲಾಗಿದೆ. ಇಲ್ಲಿನ ಶಾಂತಿನಗರ ನಿವಾಸಿಯಾಗಿರುವ ಶಾಂತಿಲಾಲ್ ಶ್ರೀವಸ್ತವ್ ಎಂಬುವರು ಮಾರಾಟಕ್ಕಾಗಿ ನವಿ ಮುಂಬೈ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋಗಳನ್ನು ಖರೀದಿಸಿದ್ದರು. ಅಂಗಡಿ ಮುಂದೆ ಇಡಲಾಗಿದ್ದ ಟೊಮೆಟೋಗಳನ್ನು ಖದೀಮರು ರಾತ್ರೋ ರಾತ್ರಿ ಲಪಟಾಯಿಸಿದ್ದಾರೆ. ಮಾರನೇ ದಿನ ಅಂಗಡಿಗೆ ಬರುವಷ್ಟರಲ್ಲಿ ಟೊಮೆಟೋ ಮತ್ತು ಕ್ರೇಟ್‌'ಗಳು ಎಲ್ಲವೂ ಮಾಯವಾಗಿದ್ದವು. ಈ ಬಗ್ಗೆ ದಹೀಸರ್ ಠಾಣೆಯಲ್ಲಿ ಅವರು ದೂರು ದಾಖಲಾಗಿದೆ. ಅಂಗಡಿಯ ಮುಂಭಾಗದಲ್ಲಿ ಸಿಸಿಟೀವಿ ಇಲ್ಲದಿರುವುದು ದರೋಡೆಕೋರರನ್ನು ಭೇದಿಸಲು ಅಡ್ಡಿಯಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

epaperkannadaprabha.com