ಕಾಶ್ಮೀರದಲ್ಲಿ ಕಲ್ಲೆಸೆತಗಾರರನ್ನು ಸಂಘಟಿಸುವುದಕ್ಕಾಗಿ ಕಾರ್ಯಾಚರಿಸುತ್ತಿದ್ದ ಸುಮಾರು 300 ವಾಟ್ಸಪ್ ಗುಂಪುಗಳಲ್ಲಿ, ಶೇ. 90ರಷ್ಟುಗುಂಪುಗಳನ್ನು ಮುಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಗರ(ಎ.25): ಕಾಶ್ಮೀರದಲ್ಲಿ ಕಲ್ಲೆಸೆತಗಾರರನ್ನು ಸಂಘಟಿಸುವುದಕ್ಕಾಗಿ ಕಾರ್ಯಾಚರಿಸುತ್ತಿದ್ದ ಸುಮಾರು 300 ವಾಟ್ಸಪ್ ಗುಂಪುಗಳಲ್ಲಿ, ಶೇ. 90ರಷ್ಟುಗುಂಪುಗಳನ್ನು ಮುಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಎನ್ಕೌಂಟರ್ ತಾಣಗಳಲ್ಲಿ ಭದ್ರತಾ ಪಡೆಗಳ ಕಾರ್ಯಾಚರ ಣೆಗಳನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಕಲ್ಲೆಸೆತಗಾ ರರನ್ನು ವಾಟ್ಸಪ್ ಗುಂಪುಗಳ ಮೂಲಕ ಸಂಘಟಿಸ ಲಾಗುತಿತ್ತು. ಇಂಥ ಗುಂಪುಗಳು ಮತ್ತು ಅವುಗಳ ಅಡ್ಮಿನಿಸ್ಪ್ರೇಟರ್ಗಳನ್ನು ಗುರುತಿಸಿ ಕರೆಸಿಕೊಂಡ ಪೊಲೀಸರು ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಈ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಅವುಗಳಲ್ಲಿ ಕಳೆದ 3 ವಾರಗಳಲ್ಲಿ ಶೇ.90ರಷ್ಟುಗುಂಪುಗಳನ್ನು ಮುಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.