ಬಲೂಚಿಸ್ತಾನದ ಆಂತರಿಕ ಸಚಿವ ಮಿರ್ ಸರ್ಪರಾಜ್ ಬುಗ್ತಿ ಸ್ಫೋಟವಾಗಿರುವ ಹಾಗೂ ಹೆಚ್ಚು ಮಂದಿ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ
ಕರಾಚಿ(ನ.12): ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ 30 ಮಂದಿ ಮೃತಪಟ್ಟು 100ಕ್ಕೂ ಜನರು ಗಾಯಗೊಂಡಿದ್ದಾರೆ. ಸ್ಫೋಟವು ಲಸ್ಬೆಲಾ ಜಿಲ್ಲೆಯ ದೂರದ ಪ್ರದೇಶದ ಸೂಫಿಗಳ ಪ್ರಮುಖ ಯಾತ್ರಸ್ಥಳದಲ್ಲಿ ಸಂಭವಿಸಿದೆ. ಬಲೂಚಿಸ್ತಾನದ ಆಂತರಿಕ ಸಚಿವ ಮಿರ್ ಸರ್ಪರಾಜ್ ಬುಗ್ತಿ ಸ್ಫೋಟವಾಗಿರುವ ಹಾಗೂ ಹೆಚ್ಚು ಮಂದಿ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಇಲ್ಲಿಯವರೆಗೂ ಯಾವ ಸಂಘಟನೆಯೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
