ಉತ್ತರಕನ್ನಡ, [ಮಾ.09]: ಪ್ರವಾಸಕ್ಕೆ ತೆರಳಿದ್ದ ಮೂವರು ಯುವಕರು ನೀರು ಪಾಲಾದ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಬುರುಡೆ ಫಾಲ್ಸ್ ನಲ್ಲಿ ನಡೆದಿದೆ. 

ಜಿಲ್ಲೆಯ ಸಿದ್ದಾಪುರ ಮೂಲದ ಇಬ್ಬರು, ಶಿರಸಿಯ ಒಬ್ಬ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪಿದ್ದವರು. ಶಿರಸಿ ಮೂಲದ ಮುರಳಿ, ಸಿದ್ದಾಪುರದ ಅಭಿಷೇಕ್ ನಾಯ್ಕ್  ಹಾಗೂ ಸಾಯಿ ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

ಸಾಯಿ ಸಿದ್ದಾಪುರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ‌. ಈ ಬಗ್ಗೆ ಸಿದ್ದಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.