3 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ

First Published 27, Feb 2018, 2:02 PM IST
3 year old girl rape and murder
Highlights

ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ  ಕೊಲೆ ಮಾಡಿರುವ ದಾರುಣ ಘಟನೆ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಬೆಂಗಳೂರು (ಫೆ.27):  ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ  ಕೊಲೆ ಮಾಡಿರುವ ದಾರುಣ ಘಟನೆ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
ಉತ್ತರ ಪ್ರದೇಶದ ಮೂಲದ ದಂಪತಿಯ ಮೂರು ವರ್ಷದ ಕಂದಮ್ಮ  ಮೇಲೆ ಅತ್ಯಾಚಾರವೆಸಗಿ  ತಲೆ ಮೇಲೆ ಕಲ್ಲು ಎತ್ತಿ ಹಾಕಿ  ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.  ಕೂಲಿ ಕೆಲಸಕ್ಕಾಗಿ ಉತ್ತರ ಪ್ರದೇಶದಿಂದ  ದಂಪತಿಗಳು ಬೆಂಗಳೂರಿಗೆ ಬಂದಿದ್ದರು.  ಕಳೆದ ರಾತ್ರಿ ಮನೆಯಿಂದ ಕಾಣೆಯಾಗಿದ್ದ ಮೂರು ವರ್ಷದ ಮಗಳು ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾಳೆ. 

ಬಾಲಕಿ ಮೇಲೆ ಲೈಂಗಿಕ  ದೌರ್ಜನ್ಯ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.  ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಕೊತ್ತನೂರು ಪೊಲೀಸರು ತನಿಖೆ‌ ಚುರುಕುಗೊಳಿಸಿದ್ದಾರೆ.  ಉತ್ತರ ಪ್ರದೇಶ ಮೂಲದವರೇ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆಯಿದೆ.  ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆದಿದೆ. 

loader