ಪೇದೆ ಸಲೀಂ ಅವರನ್ನು ಕೊಂದಿದ್ದ ಉಗ್ರರು ಮಟಾಷ್ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆಸಲೀಂ ಹುತಾತ್ಮರಾಗಿ ಒಂದೇ ದಿನದಲ್ಲಿ ಉಗ್ರರ ಬೇಟೆ
ಶ್ರೀನಗರ(ಜು.22): ನಿನ್ನೆಯಷ್ಟೇ ಪೊಲೀಸ್ ಪೇದೆಯೋರ್ವರನ್ನು ಅಪಹರಿಸಿ ಕೊಂದು ಹಾಕಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ನಿನ್ನೆ ಕುಲ್ಗಾಮ್ ಜಿಲ್ಲೆಯಲ್ಲಿ ಪೊಲೀಸ್ ಪೇದೆ ಸಲೀಂ ಅಹ್ಮದ್ ಶಾಹ್ ಅವರನ್ನು ಅಪಹರಿಸಿದ್ದ ಉಗ್ರರು, ಅವರನ್ನು ಕೊಂದು ಹಾಕಿದ್ದರು.
ಪೇದೆ ಸಲೀಂ ಅವರನ್ನು ಕೊಂದಿದ್ದ ಉಗ್ರರ ಬೇಟೆಗೆ ಜಾಲ ಬೀಸಿದ ಸೇನೆ, ಸಲೀಂ ಅವರನ್ನು ಅಪಹರಿಸಿದ್ದ ಸ್ಥಳದಿಂದ ಕೇವಲ ೨ ಕಿ.ಮೀ ದೂರದಲ್ಲಿ ಅವಿತಿದ್ದ ಮೂವರು ಉಗ್ರರನ್ನು ಕೊಂದು ಹಾಕಿದೆ.
ಈ ಕುರಿತು ಮಾಹಿತಿ ನೀಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಶೇಶ್ ಪಾಲ್ ವೇದ್, ನಮ್ಮ ಸಹೋಧ್ಯೋಗಿ ಸಲೀಂ ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಂದು ಹಾಕಿದ್ದ ಉಗ್ರರನ್ನು ಅವರು ಸೇರಬೇಕಾದ ಸ್ಥಳಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.
