ಪಾಕ್ ಮೂಲದ ಮೂವರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದ ಅಮೆರಿಕ

3 Pakistanis named as Global Terrorist for Providing support to LeT Taliban
Highlights

ಪಾಕ್ ಮೂಲದ ಉಗ್ರ ಸಂಘಟನೆಗಳಾದ ಲಷ್ಕರ್ ಇ ತೋಯ್ಬಾ, ತಾಲಿಬಾನ್ ಸಂಘಟನೆಗಳಿಗೆ ಬೆಂಬಲ ನೀಡುತ್ತಿದ್ದ ಮೂವರು ಉಗ್ರರನ್ನು ಅಮೆರಿಕ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ.

ವಾಷಿಂಗ್ಟನ್ : ಪಾಕ್ ಮೂಲದ ಉಗ್ರ ಸಂಘಟನೆಗಳಾದ ಲಷ್ಕರ್ ಇ ತೋಯ್ಬಾ, ತಾಲಿಬಾನ್ ಸಂಘಟನೆಗಳಿಗೆ ಬೆಂಬಲ ನೀಡುತ್ತಿದ್ದ ಮೂವರು ಉಗ್ರರನ್ನು ಅಮೆರಿಕ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ.

ಅತ್ಯಂತ ಪಾತಕಿ ಉಗ್ರ ಸಂಘಟನೆಗಳಾದ  ಈ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂವರು ಉಗ್ರರು ಕೂಡ ಸಾಕಷ್ಟು ದುಷ್ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ರಹಮಾನ್ ಜೆಬ್ ಫಕೀರ್ ಅಹ್ಮದ್,  ಹಿಜಬ್ ಉಲ್ಲಾ ಅಸ್ತಮ್ ಖಾನ್,  ದಿಲಾವರ್ ಖಾನ್ ನಾದಿರ್ ಖಾನ್ ಎನ್ನುವ ಮೂವರು ಉಗ್ರರನ್ನು ಜಾಗತಿಕ ಉಗ್ರರೆನ್ನಲಾಗಿದೆ.

ಈ ಮೂವರು ಉಗ್ರರೊಂದಿಗೆ ಯಾವುದೇ ರೀತಿಯಾದ ವ್ಯವಹಾರವನ್ನೂ ಕೂಡ ಯಾರೂ ನಡೆಸುವಂತಿಲ್ಲ ಎಂದು ಆದೇಶ ನೀಡಿದೆ.

loader