ಮುಂಬೈ [ಜು.30] : ಇತ್ತ ಕರ್ನಾಟಕದಲ್ಲಿ ದೋಸ್ತಿಯಾಗಿ ಅಧಿಕಾರಕ್ಕೆ ಏರಿದ್ದ ಕಾಂಗ್ರೆಸ್ ಕೆಳಕ್ಕೆ ಇಳಿದು ಬಿಜೆಪಿ ಪಟ್ಟಕ್ಕೇರಿದೆ. ಅತ್ತ ಮಹಾರಾಷ್ಟ್ರದಲ್ಲಿ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಸೇರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 

ಕಳೆದ 2 ದಿನಗಳ ಹಿಂದಷ್ಟೇ  NCP ನಾಯಕ ಬಿಜೆಪಿ ಸೇರಿದ ಬೆನ್ನಲ್ಲೇ ಮತ್ತೆ ಮೂವರು ಕಮಲ ಪಾಳಯ ಸೇರಲು ಸಿದ್ಧರಾಗಿದ್ದಾರೆ. ಇವರೊಂದಿಗೆ ಓರ್ವ ಕಾಂಗ್ರೆಸ್ ಶಾಸಕರೂ ಕೂಡ ಸೇರುತ್ತಿರುವುದಾಗಿ ಘೋಷಿಸಿದ್ದಾರೆ. 

ಬಿಜೆಪಿ ಸೇರಲು ಸಜ್ಜಾದರು 50 ಕಾಂಗ್ರೆಸ್, NCP ಶಾಸಕರು

NCPಯ ಶಿವೇಂದ್ರ ಸಿಂಗ್, ವೈಭವ್ ಪಿಚದ್, ಸಂದೀಪ್ ನಾಯ್ಕ್, ಕಾಂಗ್ರೆಸ್  ಶಾಸಕ ಕಾಳಿದಾಸ್ ಕೊಲಂಬ್ಕರ್  ಜುಲೈ 31 ರಂದು ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.  

ಉತ್ತರ ಕರ್ನಾಟಕದತ್ತ ಆಪರೇಶನ್, ಮತ್ತೆ 6 ಶಾಸಕರ ಮುಖ ಬಿಜೆಪಿ ಕಡೆಗೆ?

ಇದರ ಬೆನ್ನಲ್ಲೇ ಇದಕ್ಕೂ ಹೆಚ್ಚಿನ ಸಂಖ್ಯೆ ನಾಯಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎಂದು ಬಿಜೆಪಿ ಸಚಿವರೋರ್ವರು ಹೇಳಿದ್ದು, ಚುನಾವಣೆ ಸಮೀಪಿಸುತ್ತಿರುವ ಬೆನ್ನಲೇ ಕಾಂಗ್ರೆಸ್ ಹಾಗೂ ಶರದ್ ಪವಾರ್ ನೇತೃತ್ವದ NCPಗೆ ಭಾರಿ ಹಿನ್ನಡೆ ಎದುರಾಗುತ್ತಿದೆ. 

2019r ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಇಲ್ಲಿ ಕಮಲ ಪಾಳಯ ಮತ್ತೊಮ್ಮೆ ಅಧಿಕಾರಕ್ಕೆ ಏರಲು ಸಿದ್ಧತೆ ನಡೆಸಿದೆ.