ಬಂಡೆ ಸಿಡಿಸಲು ನಿನ್ನೆ ಇಲ್ಲಿ ಜಿಲೆಟಿನ್ ಸಿಡಿಮದ್ದು ಅಳವಡಿಸಲಾಗಿತ್ತು. ಗುಡುಗು ಸಿಡಿಲ ರಭಸಕ್ಕೆ ಜಿಲೆಟಿನ್ ಸ್ಫೋಟಗೊಂಡಿರುವ ಶಂಕೆ ಇದೆ.
ಹಾಸನ(ಮೇ 02): ಕಲ್ಲುಕ್ವಾರಿಯಲ್ಲಿ ಸಿಡಿಮದ್ದು ಸ್ಫೋಟಗೊಂಡು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಜಗದೀಶ್(50), ಪುನೀತ್(22), ಮತ್ತು ನಾಗರಾಜು(40) ಎಂದು ಗುರುತಿಸಲಾಗಿದೆ. ಇನ್ನೂ ಕೆಲವಾರು ಮಂದಿಗೆ ಗಾಯಗಳಾಗಿವೆ. ಹಾಸನ ತಾಲೂಕಿನ ಕಟ್ಟಾಯ ಬಳಿ ಕಲ್ಲುಕ್ವಾರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬಂಡೆ ಸಿಡಿಸಲು ನಿನ್ನೆ ಇಲ್ಲಿ ಜಿಲೆಟಿನ್ ಸಿಡಿಮದ್ದು ಅಳವಡಿಸಲಾಗಿತ್ತು. ಗುಡುಗು ಸಿಡಿಲ ರಭಸಕ್ಕೆ ಜಿಲೆಟಿನ್ ಸ್ಫೋಟಗೊಂಡಿರುವ ಶಂಕೆ ಇದೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
