ಮೂರು ದಿನಗಳ ಧರ್ಮ ಸಂಸದ್'ಗೆ ಉಡುಪಿಯಲ್ಲಿಂದು ತೆರೆ ಬೀಳಲಿದೆ. ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಮಾಡಿಯೇ ಸಿದ್ದ ಎಂಬ ಹಕ್ಕೋತ್ತಾಯದ ನಿರ್ಣಯ ಇಂದು ಹೊರಬೀಳಲಿದೆ. ಸಂಜೆ ನಡೆಯಲಿರುವ ವಿರಾಟ್ ಹಿಂದೂ ಸಮಾವೇಷದ ಮೂಲಕ ಧರ್ಮ ಸಂಸದ್ ಅಂತ್ಯವಾಗಲಿದೆ.
ಉಡುಪಿ (ನ.26): ಮೂರು ದಿನಗಳ ಧರ್ಮ ಸಂಸದ್'ಗೆ ಉಡುಪಿಯಲ್ಲಿಂದು ತೆರೆ ಬೀಳಲಿದೆ. ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಮಾಡಿಯೇ ಸಿದ್ದ ಎಂಬ ಹಕ್ಕೋತ್ತಾಯದ ನಿರ್ಣಯ ಇಂದು ಹೊರಬೀಳಲಿದೆ. ಸಂಜೆ ನಡೆಯಲಿರುವ ವಿರಾಟ್ ಹಿಂದೂ ಸಮಾವೇಷದ ಮೂಲಕ ಧರ್ಮ ಸಂಸದ್ ಅಂತ್ಯವಾಗಲಿದೆ.
ರಾಮಮಂದಿರ ನಿರ್ಮಾಣ ವಿಚಾರ ಇಂದು ಅಧಿಕೃತವಾಗಿ ಘೋಷಣೆಯಾಗಲಿದೆ. ಒಂದು ವರ್ಷದೊಳಗೆ ಮಂದಿರ ನಿರ್ಮಾಣಕ್ಕೆ ಪಣ ತೆಗೆದುಕೊಂಡು, ಮೋದಿ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಇನ್ನು ಹಿಂದೂ ಧರ್ಮಕ್ಕೆ ಕಳಂಕವಾಗಿರುವ ಅಸ್ಪೃಷ್ಯತೆ, ಮತಾಂತರ ತಡೆ, ಘರ್ ವಾಪಸಿ, ಗೋ ಹತ್ಯೆ ನಿಷೇಧ ಕಾನೂನಿನ ಹಕ್ಕೊತ್ತಾಯ ಕೂಡ ಧರ್ಮ ಸಂಸದ್ ನಿರ್ಣಯಗಳಲ್ಲಿ ಸೇರಲಿದೆ.
ಇಂದು ಬೆಳಗ್ಗೆ 10 ಗಂಟೆಗೆ ಧರ್ಮ ಸಂಸದ್ ನಲ್ಲಿ ವಿವಿಧ ಸಮಾಜದ ಮುಖಂಡರ ಸಭೆ ನಡೆಯುತ್ತದೆ. ಮಧ್ಯಾಹ್ನ 2.30ಕ್ಕೆ ಶೋಭಾ ಯಾತ್ರೆಯ ಮೂಲಕ ಎಂ ಜಿ ಎಂ ಮೈದಾನಕ್ಕೆ ತಲುಪಲಿದ್ದಾರೆ. ಮಧ್ಯಾಹ್ನ 4 ಗಂಟೆಗೆ ವಿರಾಟ್ ಹಿಂದೂ ಸಮಾಜೋತ್ಸವ ನಡೆಯಲಿದ್ದು, ಪೇಜಾವರ ಶ್ರೀಗಳು ಮತ್ತು ವೀರೇಂದ್ರ ಹೆಗ್ಗಡೆಯವರು ಪ್ರಮುಖ ಭಾಷಣ ಮಾಡಲಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗುವ ಬಗ್ಗೆ ಇನ್ನೂ ಖಚಿತವಾಗಿಲ್ಲ.
ಆರ್'ಎಸ್'ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಮತ್ತು ಪ್ರವೀಣ್ ತೊಗಾಡಿಯಾ ಕೂಡ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಧರ್ಮ ಸಂಸದ್'ನಲ್ಲಿ ಮಧ್ಯಸ್ಥಿಕೆ ವಹಿಸಲು ವಿರೋಧ ವ್ಯಕ್ತವಾಗಿದ್ದರಿಂದ ರವಿಶಂಕರ್ ಗುರೂಜಿ ಗೈರು ಹಾಜರಾಗುವ ಸಾಧ್ಯತೆಯಿದೆ.
