ಹೈದರಾಬಾದ್‌: ತೆಲಂಗಾಣದ ಮತ್ತೂ ಮೂರು ಶಾಸಕರು ಆಡಳಿತಾರೂಢ ಟಿಆರ್‌ಎಸ್‌ ಸೇರ್ಪಡೆಯ ಘೋಷಣೆ ಮಾಡಿದ್ದಾರೆ.

ಜೊತೆಗೆ ಇನ್ನು 2-3 ದಿನಗಳಲ್ಲಿ ಇನ್ನೂ 4 ಕಾಂಗ್ರೆಸ್‌ ಶಾಸಕರು ಪಕ್ಷಕ್ಕೆ ವಿದಾಯ ಹೇಳಿ ಟಿಆರ್‌ಎಸ್‌ ಸೇರಲಿದ್ದಾರೆ ಎನ್ನಲಾಗಿದೆ. 

ಒಂದು ವೇಳೆ ಇವರೆಲ್ಲಾ ಟಿಆರ್‌ಎಸ್‌ ಸೇರ್ಪಡೆಯಾದರೆ, ಕಾಂಗ್ರೆಸ್‌ ರಾಜ್ಯ ವಿಧಾನಸಭೆಯಲ್ಲಿ ಅಧಿಕೃತ ವಿಪಕ್ಷ ಸ್ಥಾನ ಕಳೆದುಕೊಳ್ಳಲಿದೆ. 119 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ 19 ಸ್ಥಾನ ಗೆದ್ದಿತ್ತು. 

ಈಗಾಗಲೇ 9 ಜನ ಟಿಆರ್‌ಎಸ್‌ ಸೇರ್ಪಡೆ ಘೋಷಣೆ ಮಾಡಿರುವ ಪರಿಣಾಮ ಪಕ್ಷದ ಬಲ 10ಕ್ಕೆ ಕುಸಿಯಲಿದೆ. ವಿಪಕ್ಷ ಸ್ಥಾನಮಾನ ಸಿಗಲು 12 ಸ್ಥಾನ ಬೇಕು. ಹೀಗಾಗಿ ಕಾಂಗ್ರೆಸ್‌ಗೆ ಆ ಪಟ್ಟವೂ ಕೈಬಿಡಲಿದೆ.