ಚಂದ್ರಹಾಸನಗರದಿಂದ ಪಾದೂರಿಗೆ ಪೈಪ್‌ಲೈನ್ ಅಳವಡಿಕೆ ಕಾರ್ಯ ಈಗಾಗಲೇ ಭಾಗಶ: ಮುಗಿದಿದ್ದು ಉಳಿದ ಕಾರ್ಯ ವೇಗ ಪಡೆದುಕೊಂಡಿದೆ. ಪಾದೂರು ಮತ್ತು ಚಂದ್ರಹಾಸನಗರದಲ್ಲಿ ಏಕಶಿಲೆ ದೊರೆತಿದ್ದು ಅದನ್ನು ಕೊರೆದು ಕಚ್ಛಾತೈಲವನ್ನು ಸಂಗ್ರಹಿಸಿಡುವ ಯೋಜನೆ ಇದಾಗಿದೆ.
ಮಂಗಳೂರು (ಅ.12): ದೇಶದ ಎರಡನೇ ಅತಿದೊಡ್ಡ ಭೂಗತ ತೈಲ ಸಂಗ್ರಹಾಗಾರಕ್ಕೆ ಇಂದು ಚಾಲನೆ ದೊರೆತಿದೆ. ಮಂಗಳೂರು ಹೊರವಲಯದ ಪೆರ್ಮುದೆಯಲ್ಲಿ ಸಂಸದ ನಳಿನ್ಕುಮಾರ್ ಕಟೀಲ್ ತೈಲಾಗಾರಕ್ಕೆ ಚಾಲನೆ ನೀಡಿದ್ದಾರೆ. ಇರಾನ್ನಿಂದ ಬಂದ ಕಚ್ಛಾತೈಲವನ್ನು ಇಲ್ಲಿ ಸಂಗ್ರಹ ಮಾಡಲಾಗಿದೆ.
ಮಂಗಳೂರು ಬಂದರು ಮೂಲಕ 0.26 ಮೆಟ್ರಿಕ್ ಟನ್ ತೈಲ ಇರಾನ್ನಿಂದ ಬಂದಿದ್ದು, ಅದನ್ನು ಇಲ್ಲಿ ಸಂಗ್ರಹಿಸಲಾಯಿತು. ಆಂಧ್ರ ಪ್ರದೇಶದ ವಿಶಾಖಪಟ್ಟಣಂ, ಉಡುಪಿಯ ಪಾದೂರು, ಬಜ್ಪೆಯ ಚಂದ್ರಹಾಸನಗರದ ತೈಲ ಸ್ಥಾವರ ದೇಶದ ಮೂರನೇ ಸ್ಥಾವರವಾಗಿದೆ.
ಚಂದ್ರಹಾಸನಗರದಿಂದ ಪಾದೂರಿಗೆ ಪೈಪ್ಲೈನ್ ಅಳವಡಿಕೆ ಕಾರ್ಯ ಈಗಾಗಲೇ ಭಾಗಶ: ಮುಗಿದಿದ್ದು ಉಳಿದ ಕಾರ್ಯ ವೇಗ ಪಡೆದುಕೊಂಡಿದೆ. ಪಾದೂರು ಮತ್ತು ಚಂದ್ರಹಾಸನಗರದಲ್ಲಿ ಏಕಶಿಲೆ ದೊರೆತಿದ್ದು ಅದನ್ನು ಕೊರೆದು ಕಚ್ಛಾತೈಲವನ್ನು ಸಂಗ್ರಹಿಸಿಡುವ ಯೋಜನೆ ಇದಾಗಿದೆ.
ದೇಶದ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ದೇಶದ ಮೂರು ಘಟಕಗಳಲ್ಲಿ 15 ದಿನಕ್ಕೆ ಆಗುವಷ್ಟು ತೈಲ ಸಂಗ್ರಹ ಸಾಮರ್ಥ್ಯದ ವ್ಯವಸ್ಥೆ ಮಾಡಲಾಗಿದೆ.
