2ಜಿ: ಖುಲಾಸೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ

news | Saturday, May 26th, 2018
Suvarna Web Desk
Highlights

ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಆ.2ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. 2ಜಿ ತರಂಗಾಂತರ ಹಂಚಿಕೆ ಪ್ರಕರಣದಿಂದ ದೇಶಕ್ಕೆ ಭಾರೀ ನಷ್ಟ ಉಂಟಾಗಿದೆ ಮತ್ತು ಈ ಪ್ರಕರಣ ದೇಶವೇ ನಾಚಿಕೆ ಪಡುವಂತಹದ್ದು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ ಕೋರ್ಟ್’ನಲ್ಲಿ ವಾದಿಸಿದ್ದಾರೆ. 

ನವದೆಹಲಿ[ಮೇ.26]: ಬಹುಕೋಟಿ 2ಜಿ ತರಂಗಾಂತರ ಹಗರಣದಲ್ಲಿ ಮಾಜಿ ಟೆಲಿಕಾಮ್ ಸಚಿವ ಎ. ರಾಜಾ, ಡಿಎಂಕೆ ಸಂಸದೆ ಕನ್ನಿಮೋಳಿ ಹಾಗೂ ಇತರರು ಖುಲಾಸೆಯಾಗಿರುವುದನ್ನು ಪ್ರಶ್ನಿಸಿ ಸಿಬಿಐ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. 
ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಆ.2ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. 2ಜಿ ತರಂಗಾಂತರ ಹಂಚಿಕೆ ಪ್ರಕರಣದಿಂದ ದೇಶಕ್ಕೆ ಭಾರೀ ನಷ್ಟ ಉಂಟಾಗಿದೆ ಮತ್ತು ಈ ಪ್ರಕರಣ ದೇಶವೇ ನಾಚಿಕೆ ಪಡುವಂತಹದ್ದು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ ಕೋರ್ಟ್’ನಲ್ಲಿ ವಾದಿಸಿದ್ದಾರೆ. 
ಸಿಬಿಐ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಎ.ರಾಜಾ ಹಾಗೂ ಕನ್ನಿಮೋಳಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಈ ಸಂಬಂಧ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ಆ.6ಕ್ಕೆ ನಿಗದಿಯಾಗಿದೆ.

Comments 0
Add Comment

  Related Posts

  IPL Team Analysis Delhi Daredevils Team Updates

  video | Saturday, April 7th, 2018

  SC ST Act Effect May Enter Karnataka Part 2

  video | Thursday, April 5th, 2018

  SC ST Act Effect May Enter Karnataka Part 2

  video | Thursday, April 5th, 2018

  SC ST Act Effect May Enter Karnataka Part 1

  video | Thursday, April 5th, 2018

  IPL Team Analysis Delhi Daredevils Team Updates

  video | Saturday, April 7th, 2018
  Naveen Kodase