Asianet Suvarna News Asianet Suvarna News

ಕೋಮುಗಲಭೆ: ದೇಶದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ..! ಟಾಪ್-3 ಪಟ್ಟಿಯಲ್ಲಿ 2 ಬಿಜೆಪಿ ಸರ್ಕಾರದ ರಾಜ್ಯಗಳು..!

2014-2016ನೇ ಸಾಲಿನಲ್ಲಿ ಕರ್ನಾಟಕ 279 ಕೋಮು ಗಲಭೆಗಳಿಗೆ ಸಾಕ್ಷಿಯಾಗಿದೆ ಎಂದು ರಾಜ್ಯಸಭೆಗೆ ಸರ್ಕಾರ ಮಾಹಿತಿ ನೀಡಿದೆ. ಬಿಜೆಪಿ ಆಳ್ವಿಕೆಯ ಉತ್ತರಪ್ರದೇಶ 450 ಗಲಭೆ ಪ್ರಕರಣಗಳೊಂದಿಗೆ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದ್ದರೆ, ಮತ್ತೊಂದು ಬಿಜೆಪಿ ಆಳ್ವಿಕೆಯ ರಾಜ್ಯ ಮಹಾರಾಷ್ಟ್ರ 270 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

278 killed in communal violence in 3 years Says Govt

ನವದೆಹಲಿ(ಡಿ.21): ಉತ್ತರ ಕನ್ನಡ, ಬೆಳಗಾವಿ ಗಲಭೆಗಳ ಬೆನ್ನಲ್ಲೇ ಕರ್ನಾಟಕ ಕಳವಳಪಡಬೇಕಾದ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಕೋಮುಗಲಭೆಗಳ ಸಂಖ್ಯೆಯಲ್ಲಿ ಕರುನಾಡು ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ ಎಂದು ಖುದ್ದು ಕೇಂದ್ರ ಸರ್ಕಾರವೇ ಸಂಸತ್ತಿಗೆ ಮಾಹಿತಿ ನೀಡಿದೆ.

2014-2016ನೇ ಸಾಲಿನಲ್ಲಿ ಕರ್ನಾಟಕ 279 ಕೋಮು ಗಲಭೆಗಳಿಗೆ ಸಾಕ್ಷಿಯಾಗಿದೆ ಎಂದು ರಾಜ್ಯಸಭೆಗೆ ಸರ್ಕಾರ ಮಾಹಿತಿ ನೀಡಿದೆ. ಬಿಜೆಪಿ ಆಳ್ವಿಕೆಯ ಉತ್ತರಪ್ರದೇಶ 450 ಗಲಭೆ ಪ್ರಕರಣಗಳೊಂದಿಗೆ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದ್ದರೆ, ಮತ್ತೊಂದು ಬಿಜೆಪಿ ಆಳ್ವಿಕೆಯ ರಾಜ್ಯ ಮಹಾರಾಷ್ಟ್ರ 270 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಬಿಜೆಪಿ ಆಡಳಿತ ನಡೆಸುತ್ತಿರುವ ಮಧ್ಯಪ್ರದೇಶ (205) ಹಾಗೂ ರಾಜಸ್ಥಾನ (200) ನಂತರದ ಸ್ಥಾನದಲ್ಲಿವೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

ಬಿಹಾರ (197) ಆರು ಹಾಗೂ ಗುಜರಾತ್(182) ಏಳನೇ ಸ್ಥಾನ ಪಡೆದಿವೆ. ವಿಶೇಷ ಎಂದರೆ ಮೇಘಾಲಯ, ಗೋವಾ, ಮೀಜೋರಂ, ನಾಗಾಲ್ಯಾಂಡ್, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲಿ ಕೋಮುಗಲಭೆಯೇ ಸಂಭವಿಸಿಲ್ಲ.  

 

Follow Us:
Download App:
  • android
  • ios